ಸ್ಯಾಂಡಲ್ವುಡ್ ‘ಡಾಲಿ’ ಹುಟ್ಟುಹಬ್ಬ: ಹೊಸ ಬಿರುದು ನೀಡಿದ ‘ಸಲಗ’

461

ನಟ ಧನಂಜಯ ಟಗರು ಸಿನ್ಮಾ ಮೂಲಕ ಮರಳಿ ಟ್ರ್ಯಾಕ್ ಗೆ ಮರಳಿದ ನಟ. ಟಗರು ಸಿನ್ಮಾದಲ್ಲಿ ನಿರ್ದೇಶಕ ಸೂರಿ ಸೃಷ್ಟಿಸಿದ ಡಾಲಿ ಪಾತ್ರ ಧನಂಜಯನಿಗೆ ಹೊಸ ಇಮೇಜ್ ನೀಡಿತು. ಶಿವಣ್ಣನ ಪಾತ್ರದಷ್ಟೆ ಡಾಲಿ ಪಾತ್ರವನ್ನ ಜನ ಮೆಚ್ಚಿಕೊಂಡ್ರು. ಹೀಗೆ ಅಭಿಮಾನಿಗಳ ಪಾಲಿಗೆ ಡಾಲಿ ಧನಂಜಯನಾದ ನಟನ ಹುಟ್ಟು ಹಬ್ಬವಿಂದು.

ದುನಿಯಾ ವಿಜಯ ನಿರ್ದೇಶನದ ಮೊದಲ ಸಿನ್ಮಾ ‘ಸಲಗ’ದಲ್ಲಿ ನಟಿಸ್ತಿರುವ ನಟ ಧನಂಜಯಗೆ ವಿಜಿ, ಸಾಮ್ರಾಟ ಅನ್ನೋ ಹೊಸ ಬಿರಿದು ನೀಡಿದ್ದಾರೆ. ಸಲಗ ಸಿನ್ಮಾದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ತಿರುವ ಧನಂಜಯ ಹುಟ್ಟು ಹಬ್ಬದ ಸಲುವಾಗಿ ಪೋಸ್ಟರ್ ರಿಲೀಸ್ ಮಾಡಿದ್ದು, ಅದರಲ್ಲಿ ‘ಸಾಮ್ರಾಟ್’ ಧನಂಜಯ ಎಂದು ಬರೆಯಲಾಗಿದೆ.

ಇದರ ನಡವೆ ನಟ ಧನಂಜಯ ‘ಡಾಲಿ ಪಿಕ್ಚರ್ಸ್’ ಅನ್ನೋ ಸಂಸ್ಥೆ ಹುಟ್ಟು ಹಾಕಿ ಬಡವ ರಾಸ್ಕಲ್ ಸಿನ್ಮಾ ಶುರು ಮಾಡಿದ್ದಾರೆ. ಇದರ ಜೊತೆಗೆ ಪೊಗರು, ಯುವರತ್ನ ಸಿನ್ಮಾದಲ್ಲಿ ನಟಿಸ್ತಿದ್ದಾರೆ. ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನ್ಮಾದಲ್ಲಿ ಹೀರೋ ಆಗಿ ಮಿಂಚುತ್ತಿದ್ದಾರೆ.  




Leave a Reply

Your email address will not be published. Required fields are marked *

error: Content is protected !!