ಸಲಗ ಎಂಟ್ರಿಗೂ ಮೊದ್ಲೇ ಮತ್ತೆ ನಿರ್ದೇಶಕನಾದ ದುನಿಯಾ ವಿಜಿ

439

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ದುನಿಯಾ ವಿಜಿ ಈಗಾಗ್ಲೇ ಸಲಗ ಅನ್ನೋ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಬಹುತೇಕ ಕೆಲಸ ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಲಾಕ್ ಡೌನ್ ಇಲ್ಲದೆ ಹೋಗಿದ್ರೆ ಈಗಾಗ್ಲೇ ಒಂಟಿ ಸಲಗ ಎಂಟ್ರಿ ಆಗಬೇಕಿತ್ತು. ಆದ್ರೆ, ಕರೋನಾ ಎಲ್ಲರ ಲೆಕ್ಕಾಚಾರ ಉಲ್ಟಾ ಮಾಡಿದೆ.

ಸಲಗ ಚಿತ್ರದ ಮೂಲಕ ನಿರ್ದೇಶಕನಾಗಿ ಕಾಣಿಸಿಕೊಂಡ ದುನಿಯಾ ವಿಜಿ, ಈ ಚಿತ್ರ ರಿಲೀಸ್ ಗೂ ಮೊದ್ಲೇ ಮತ್ತೊಂದು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರಂತೆ. ಸಲಗ ಆ್ಯಕ್ಷನ್ ಮೂವಿಯಾದ್ರೆ ಇದು ರೊಮ್ಯಾಂಟಿಕ್ ಲವ್ ಸ್ಟೋರಿಯಂತೆ. ಈಗಾಗ್ಲೇ ಒಂದಿಷ್ಟು ಕೆಲಸ ಶುರುವಾಗಿದ್ದು, ವಿಜಯ ದಶಮಿಯಂದು ಕಲಾವಿದರು, ನಿರ್ಮಾಪಕರು, ನಿರ್ಮಾಣ ಸೇರಿದಂತೆ ಎಲ್ಲ ಮಾಹಿತಿ ನೀಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!