‘ಸಲಗ’ ಆರ್ಭಟಕ್ಕೆ ಮುಹೂರ್ತ ಫಿಕ್ಸ್

225

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ದುನಿಯಾ ವಿಜಿ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಪಕ್ಕಾ ಮಾಸ್ ಮೂವಿಯಾದ ಸಲಗ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಈಗಾಗ್ಲೇ ಸಾಕಷ್ಟು ಹವಾ ಕ್ರಿಯೇಟ್ ಮಾಡಿರುವ ಮೂವಿ ಅಭಿಮಾನಿಗಳೆದರು ಆರ್ಭಟಿಸಲು ಥಿಯೇಟರ್ ಗೆ ಬರಲು ಕೌಂಟ್ ಡೌನ್ ಶುರುವಾಗಿದೆ.

ಆಯುಧ ಪೂಜೆಯ ದಿನವಾದ ಅಕ್ಟೋಬರ್ 14ಕ್ಕೆ ಸಲಗ ಎಂಟ್ರಿಯಾಗುತ್ತಿದ್ದಾನೆ. ಅದಕ್ಕೂ ಮೊದ್ಲು ಟ್ರೇಲರ್ ರಿಲೀಸ್ ಮಾಡುತ್ತಿದ್ದು, ವಿಜಿ ಹಾಗೂ ಡಾಲಿ ಧನಂಜಯ್ ಅಭಿಮಾನಿಗಳಲ್ಲಿ ಮತ್ತಷ್ಟು ಕ್ರೇಜ್ ಕ್ರಿಯೇಟ್ ಮಾಡಲಿದೆ. ಶ್ರೀಕಾಂತ್ ಕೆ.ಪಿ ನಿರ್ಮಾಣ ಮಾಡಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಈಗಾಗ್ಲೇ ಭರ್ಜರಿ ಸೌಂಡ್ ಮಾಡಿದೆ.

ಇನ್ನು ಅಕ್ಟೋಬರ್ 15 ವಿಜಯ ದಶಮಿ ದಿನ ಕಿಚ್ಚ ಸುದೀಪ್ ಅಭಿಯನದ ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಆಗುತ್ತಿದ್ದು, ಸ್ಟಾರ್ ವಾರ್ ನಡೆಯುತ್ತಾ ಅಂತಿದ್ದಾರೆ ಅಭಿಮಾನಿಗಳು.




Leave a Reply

Your email address will not be published. Required fields are marked *

error: Content is protected !!