ಖಾಸಗಿ ಸಾರಿಗೆ ಬಂದ್, ಬಿಎಂಟಿಸಿ ಹೊಸ ಪ್ಲಾನ್

99

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯ ಸರ್ಕಾರದ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೂ ವಿಸ್ತರಿಸಬೇಕು ಅಥವ ರೋಡ್ ಟ್ಯಾಕ್ಸ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದಿಂದ ಇಂದು ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಹೀಗಾಗಿ ಬಿಎಂಟಿಸಿ ಹೊಸ ಪ್ಲಾನ್ ಮಾಡಿದೆ.

ಸಾರಿಗೆ ಸಾರಿಗೆ ಬಂದ್ ಇರುವುದರಿಂದ ಬೆಂಗಳೂರು ಹಾಗೂ ಹೊರ ವಲಯದ ಪ್ರಯಾಣಿಕರ ಸಲುವಾಗಿ 4 ಸಾವಿರ ಹೆಚ್ಚುವರಿ ಟ್ರಿಪ್ ನಡೆಸಲು ಮುಂದಾಗಿದೆ. ಜೊತೆಗೆ ಮೆಟ್ರೋ ಸಂಚಾರ ಸಹ ಹೆಚ್ಚಳ ಮಾಡುವ ಚಿಂತನೆ ನಡೆದಿದೆ. ಖಾಸಗಿ ಶಾಲೆಗಳ ಬಸ್ ಮಾಲೀಕರು ಸಹ ಬಂದ್ ಗೆ ಬೆಂಬಲ ನೀಡಿದ್ದು, ವಿದ್ಯಾರ್ಥಿಗಳಿಗೆ ಒಂದಿಷ್ಟು ತೊಂದರೆಯಾಗಲಿದೆ. ಆದರೆ, ಶಾಲೆಗೆ ರಜೆ ನೀಡಿಲ್ಲ.

ಇನ್ನು ಬಂದ್ ಶಾಂತಿಯುತವಾಗಿ ನಡೆಯಬೇಕು. ಇದಕ್ಕಾಗಿ ಸೂಕ್ತ ಪೊಲೀಸ್ ಬಂದೋಬಸ್ತಿ ಒದಗಿಸಲಾಗಿದೆ. ಯಾರಿಗೂ ಬಲವಂತವಾಗಿ ಬಂದ್ ಮಾಡಿ ಎಂದು ಒತ್ತಾಯಿಸಬಾರದು. ಆ ರೀತಿ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದ್ದಾರೆ.

ಖಾಸಗಿ ಆನ್ಲೈನ್ ಸಾರಿಗೆ ಕಂಪನಿಗಳನ್ನು ನಿಷೇಧಿಸಬೇಕು. ವೈಟ್ ಬೋರ್ಡ್ ವಾಹನಗಳಲ್ಲಿ ಬಾಡಿಗೆ ಹೋಗುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಚಾಲಕರಿಗೆ ಮಾಸಿಕ 10 ಸಾವಿರ ಪರಿಹಾರ ಧನ ನೀಡಬೇಕು. ವಾಹನಗಳಿಗೆ ಜೀವಿತಾವಧಿ ತೆರಿಗೆ ನಿಷೇಧಿಸಬೇಕು. ಸರ್ಕಾರಿ ಬಸ್ ಗಳಲ್ಲಿ ನಿಗದಿತ ಪ್ರಯಾಣಿಕರಕ್ಕಿಂತ ಹೆಚ್ಚಿಗೆ ಕರೆದುಕೊಂಡು ಹೋಗಬಾರದು ಸೇರಿದಂತೆ 30ಕ್ಕೂ ಹೆಚ್ಚು ಬೇಡಿಕೆಗಳನ್ನು ಇಡಲಾಗಿದೆ.




Leave a Reply

Your email address will not be published. Required fields are marked *

error: Content is protected !!