ಭಾರತ-ಪಾಕ್ ಪಂದ್ಯ ಇಂದು ಮತ್ತೆ ನಡೆಯುತ್ತಾ?

232

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಕೊಲಂಬೊ: ಏಷ್ಯ ಕಪ್ ಟ್ರೂರ್ನಿಯ ಸೂಪರ್ 4 ಪಂದ್ಯದಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿ ಆಗಿದ್ದವು. ಆದರೆ, ಮಳೆಯಿಂದಾಗಿ ಪಂದ್ಯ ಅರ್ಧಕ್ಕೆ ನಿಂತಿತು. ಹೀಗಾಗಿ ಇಂದು ಮತ್ತೆ ಪಂದ್ಯ ಮುಂದುವರೆಯಲಿದೆ.

ಟಾಸ್ ಗೆದ್ದ ಪಾಕ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಬ್ಯಾಟ್ ಮಾಡುತ್ತಿರುವ ಭಾರತ 24.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿದೆ. ರೋಹಿತ್ ಶರ್ಮಾ 56, ಗಿಲ್ 58 ರನ್ ಬಾರಿಸಿ ಔಟ್ ಆಗಿದ್ದು, ಕೊಹ್ಲಿ 8, ಕೆ.ಎಲ್ ರಾಹುಲ್ 17 ರನ್ ಗಳೊಂದಿಗೆ ಆಡುತ್ತಿದ್ದು, ಕಾಯ್ದಿರಿಸಿದ ದಿನವಾದ ಇಂದು ಆಟ ಮುಂದುವರೆಯಲಿದೆ.

ಒಂದು ವೇಳೆ ಇಂದು ಸಹ ಪಂದ್ಯ ರದ್ದಾರೆ ಎರಡೂ ತಂಡಗಳಿಗೆ ತಲಾ 1 ಪಾಯಿಂಟ್ ಬರಲಿದೆ. ಇನ್ನು ನಾಳೆ ಭಾರತ ಹಾಗೂ ಶ್ರೀಲಂಕಾ ನಡುವೆ ಪಂದ್ಯ ನಡೆಯಲಿದೆ. ಇದರಿಂದಾಗಿ ಸತತವಾಗಿ ಮೂರು ದಿನಗಳ ಕಾಲ ಪಂದ್ಯವಾಡಿದಂತೆ ಆಗಲಿದೆ.




Leave a Reply

Your email address will not be published. Required fields are marked *

error: Content is protected !!