ಇಂಡಿಯಾ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ ಮಳೆ ಅಡ್ಡಿಯಾಗುತ್ತಾ?

296

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಭರ್ಜರಿಯಾಗಿ ನಡೆದಿದೆ. ಇಂಡಿಯನ್ ಕ್ರಿಕೆಟ್ ಅಭಿಮಾನಿಗಳು ಶನಿವಾರದ ಪಂದ್ಯಕ್ಕೆ ಕಾತುರದಿಂದ ಕಾಯುತ್ತಿದ್ದಾರೆ. ಯಾಕಂದರೆ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ಪಡೆ ಕಣಕ್ಕೆ ಇಳಿಯುತ್ತಿದೆ.

ಅಹಮಾದಾಬದ್ ನಲ್ಲಿರುವ ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆಯಿದೆ ಅನ್ನೋ ವಿಚಾರ ಜೋರಾಗಿದ್ದು, ಅಭಿಮಾನಿಗಳಲ್ಲಿ ಟೆನ್ಷನ್ ಶುರುವಾಗಿದೆ. ಹವಾಮಾನ ವರದಿ ಪ್ರಕಾರ ಅಕ್ಟೋಬರ್ 14, 15ರಂದು ಅಹಮದಾಬಾದ್ ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ನಾಳೆಯ ಪಂದ್ಯದ ವೇಳೆ ಭರ್ಜರಿ ಮನರಂಜನೆಯೊಂದಿಗೆ ಕ್ರಿಕೆಟ್ ಪ್ರೇಮಿಗಳಿಗೆ ಕಿಕ್ ಕೊಡಲು ಸಜ್ಜಾಗಿರುವ ಹೊತ್ತಿನಲ್ಲಿ ಮಳೆಯಿಂದ ಪಂದ್ಯ ರದ್ದಾಗುವ ಆತಂಕ ಎದುರಾಗಿದೆ. ಮಳೆರಾಯ ಏನು ಮಾಡುತ್ತಾನೆ ಅನ್ನೋದು ನಾಳೆ ತಿಳಿಯಲಿದೆ.

ಇನ್ನು ಏಕದಿನ ವಿಶ್ವಕಪ್ ನಲ್ಲಿ ಪಾಕ್ ಎದುರು ಭಾರತ ಇದುವರೆಗೆ ಒಮ್ಮೆಯೂ ಸೋತಿಲ್ಲ. 1992 ರಿಂದ 2019ರ ತನಕ ನಡೆದ 7 ವಿಶ್ವಕಪ್ ಗಳಲ್ಲಿ ಭಾರತ ಹಾಗೂ ಪಾಕ್ ಆಡಿದ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಈ ಕಾರಣಕ್ಕೆ ಫ್ಯಾನ್ಸ್ ಭಾರತದ ಗೆಲುವಿನ ಓಟ ನೋಡಲು ಕಾಯುತ್ತಿದ್ದು, ಅವರ ಕಾಯುವಿಕೆಗೆ ಫಲ ಸಿಗುತ್ತಾ ಕಾದು ನೋಡಬೇಕು.




Leave a Reply

Your email address will not be published. Required fields are marked *

error: Content is protected !!