Search

ಗೌಳಿ ಟೀಸರ್ ಆರ್ಭಟ

398

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಶ್ರೀನಗರ ಕಿಟ್ಟಿ ಬಹಳ ವರ್ಷಗಳ ನಂತರ ಖಡಕ್ ಲುಕ್ ನಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರಿಲೀಸ್ ಆಗಿರುವ ಗೌಳಿ ಚಿತ್ರದ ಟೀಸರ್ ಎಲ್ಲೆಲ್ಲೂ ಕಿಚ್ಚು ಹಚ್ಚುತ್ತಿದೆ. ಸೂರಾ ನಿರ್ದೇಶನದ ಗೌಳಿ ಚಿತ್ರ ಟೀಸರ್ ಮೂಲಕ ಭಾರೀ ಕುತೂಹಲ ಮೂಡಿಸಿದೆ.

ಶ್ರೀನಗರ ಕಿಟ್ಟಿ ಸಿನಿ ಪಯಣದಲ್ಲಿ ಈ ರೀತಿಯ ಪಾತ್ರದಲ್ಲಿ ನೋಡಿರಲು ಸಾಧ್ಯವೇ ಇಲ್ಲ. ಅಂತಹದೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಟ್ಟಿಗೆ ಜೋಡಿಯಾಗಿ ಪಾವನಾಗೌಡ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಶರತ್ ಲೋಹಿತಾಶ್ವ, ಕಾಕರೋಚ್ ಸುದಿ, ಗೋವಿಂದಗೌಡ ಸೇರಿದಂತೆ ಅನೇಕರಿದ್ದಾರೆ.

ಸೋಹಾನ್ ಫಿಲ್ಡ್ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ರಘು ಸಿಂಗಂ ಅನ್ನೋರು ಗೌಳಿ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಶಾಂಕ್ ಶೇಷಗಿರಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಟೀಸರ್ ನಲ್ಲಿನ ಬಿಜಿಎಂ ನೋಡಿಗರಿಗೆ ಖುಷಿ ನೀಡಿದೆ.




Leave a Reply

Your email address will not be published. Required fields are marked *

error: Content is protected !!