ಒಕ್ಕೂಟ ವ್ಯವಸ್ಥೆ ಬಗ್ಗೆ ಮೋದಿ ಸರ್ಕಾರಕ್ಕೆ ರಾಹುಲ್ ಅದ್ಭುತ ಪಾಠ

237

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲೆ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಮೋದಿ ಸರ್ಕಾರ ಸಂಪೂರ್ಣ ನಾಶ ಮಾಡಲು ಹೊರಟಿದೆ. ಭಾರತ ಹಲವು ಭಾಷೆ, ಹಲವು ಸಂಸ್ಕೃತಿ, ಹಲವು ಇತಿಹಾಸಗಳನ್ನು ಹೊಂದಿದ ದೇಶ. ಅದನ್ನು ನಿಯಂತ್ರಿಸಲು ಹೊರಟಿದ್ದಾರೆ ಎಂದು ಭರ್ಜರಿ ವಾಗ್ದಾಳಿ ನಡೆಸಿದರು.

ಭಾರತವನ್ನು ಆಳಿದ ಅಶೋಕ ಚಕ್ರವರ್ತಿಯಿಂದ ಹಿಡಿದು ಎಲ್ಲರೂ ಒಕ್ಕೂಟ ವ್ಯವಸ್ಥೆಯನ್ನು ನಿರ್ಮಿಸಿದ್ದರು. ಅವರ ಮಾತು ಇವರು ಕೇಳೋದು. ಇವರ ಮಾತು ಅವರ ಕೇಳೋದು. ಅವರಿಬ್ಬರ ನಡುವೆ ಕೊಡುಕೊಳ್ಳುವಿಕೆ ಇತ್ತು. ಈ ದೇಶ ನಿರ್ಮಾಣವಾಗಿರುವುದು ಹಾಗೆ. ಅದನ್ನು ಒಡೆದು ಮಾತನಾಡಲು ಅವಕಾಶ ಕೊಡದೆ ಸರ್ವಾಧಿಕಾರ ತೋರಿಸಲಾಗುತ್ತಿದೆ ಎಂದರು. ಈ ದೇಶಕ್ಕಾಗಿ ನನ್ನ ತಾತ, ಅಜ್ಜಿ, ತಂದೆ ಪ್ರಾಣವನ್ನೇ ಕೊಟ್ಟಿದ್ದಾರೆ.

ಇಲ್ಲಿ ಎರಡು ಬಡವ ಹಾಗೂ ಶ್ರೀಮಂತ ಅನ್ನೋ ಎರಡು ಭಾರತವಿದೆ. 10 ಶ್ರೀಮಂತರಲ್ಲಿ ದೇಶದ ಶೇಕಡ 40ಕ್ಕಿಂತ ಹೆಚ್ಚು ಸಂಪತ್ತಿದೆ ಎಲ್ಲ ವಲಯದಲ್ಲಿ ಅಂಬಾನಿ ಹಾಗೂ ಅದಾನಿ ಮೋದಿ ಸರ್ಕಾರ ನೀಡಿದೆ. ಯುವ ಜನತೆಯನ್ನು, ರೈತರನ್ನು, ಸಣ್ಣ, ಮಧ್ಯಮ ಉದ್ಯಮಿಗಳನ್ನು ಸಾಯಿಸಲಾಗುತ್ತಿದೆ. ಕಳೆದೊಂದು ವರ್ಷದಲ್ಲಿ 3 ಕೋಟಿ ಯುವಜನತೆ ಉದ್ಯೋಗ ಕಳೆದುಕೊಂಡಿದ್ದಾರೆ ಎಂದರು. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಏನಾದವರು ಎಂದರು. ಇನ್ನು ಚೀನಾ ಹಾಗೂ ಪಾಕ್ ಗಡಿಯಲ್ಲಿ ನಿಂತುಕೊಂಡಿವೆ. ಚೀನಾ ಈಗಾಗ್ಲೇ ಭಾರತದ ಪ್ರದೇಶವನ್ನು ಅತಿಕ್ರಮಣಿಸುತ್ತಿದೆ. ಅದರ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳದೆ ಹೋದರೆ ಈ ದೇಶ ಸುರಕ್ಷವಲ್ಲ. ಹೊರಗಿನ ಹಾಗೂ ಒಳಗಿನ ಶತ್ರುಗಳಿಂದ ಈ ದೇಶವನ್ನು ರಕ್ಷಿಸಬೇಕಿದೆ ಎಂದು ಭರ್ಜರಿ ವಾಗ್ದಾಳಿ ನಡೆಸಿದರು.




Leave a Reply

Your email address will not be published. Required fields are marked *

error: Content is protected !!