ಭಾರತದ ಮಾರಕ ಬೌಲಿಂಗ್, 191ಕ್ಕೆ ಪಾಕ್ ಆಲೌಟ್

247

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಅಹಮಾದಾಬಾದ್: ಇಲ್ಲಿಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಟೂರ್ನಿಯ 12 ಪಂದ್ಯದಲ್ಲಿ ಭಾರತ ಹಾಗೂ ಪಾಕ್ ಕಣಕ್ಕೆ ಇಳಿದಿದ್ದು, ಟಾಸ್ ಗೆದ್ದ ಟೀ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಲೆಕ್ಕಾಚಾರವನ್ನು ಬೌಲರ್ ಗಳನ್ನು ನಿಜ ಮಾಡಿದರು.

ಭಾರತದ ಬೌಲರ್ ಗಳ ಎದುರು ಪಾಕ್ ಆಟಗಾರರು ಆಡಲು ಆಗದೆ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಆಲೌಟ್ ಆಗಿದ್ದಾರೆ. ನಾಯಕ ಬಾಬರ್ ಅಜಂ 50, ವಿಕೆಟ್ ಕೀಪರ್ ಅಹಮ್ಮದ್ ರಿಜ್ವಾನ್ 49, ಇಮಾಮ್ ಉಲ್ ಹಕ್ 36 ರನ್ ಹೊರತು ಪಡಿಸಿ ಉಳಿದವರು ಹೀಗೆ ಬಂದು ಹಾಗೇ ಹೋದರು.

ಟೀಂ ಇಂಡಿಯಾ ಪರ ಬೂಮ್ರಾ, ಸಿರಾಜ್, ಪಾಂಡ್ಯೆ, ಯಾದವ್, ಜಡೇಜಾ ಎಲ್ಲರೂ ತಲಾ 2 ವಿಕೆಟ್ ಪಡೆದರು. 2 ಓವರ್ ಮಾಡಿದ ಶ್ರಾದೂಲ್ ಠಾಕೂರ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.




Leave a Reply

Your email address will not be published. Required fields are marked *

error: Content is protected !!