ಕೇಸರಿ ಜರ್ಸಿಯಲ್ಲಿ ಟೀಂ ಇಂಡಿಯಾ ಆಡಲ್ಲ: ಬಿಸಿಸಿಐ

198

ಪ್ರಜಾಸ್ತ್ರ ಕ್ರೀಡಾ ಸುದ್ದಿ

ನವದೆಹಲಿ: ಏಕದಿನ ವಿಶ್ವಕಪ್ 2023ರ ಟೂರ್ನಿ ಭಾರತದಲ್ಲಿ ನಡೆಯುತ್ತಿದೆ. ದಿನದಿಂದ ದಿನಕ್ಕೆ ಪಂದ್ಯಗಳು ರೋಚಕತೆಯಿಂದ ಕೂಡುತ್ತಿದ್ದು, ಕ್ರಿಕೆಟ್ ಪ್ರೇಮಿಗಳು ಆನಂದಿಸುತ್ತಿದ್ದಾರೆ. ಇದರ ನಡುವೆ ಭಾರತ ತನ್ನ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಅಕ್ಟೋಬರ್ 14ರಂದು ಎದುರಸಲಿದೆ. ಈ ವೇಳೆ ಕೇಸರಿ ಜರ್ಸಿ ಧರಿಸಲಿದೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಪಾಕ್ ವಿರುದ್ಧ ಕೇಸರಿ ಜರ್ಸಿ ಧರಿಸಿ ಟೀಂ ಇಂಡಿಯಾ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ ಅನ್ನೋ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದು, ರಾಜಕೀಯ ಬಣ್ಣ ಪಡೆದುಕೊಂಡಿದೆ. ಆದರೆ ಇದನ್ನು ಬಿಸಿಸಿಐ ತಳ್ಳಿ ಹಾಕಿದೆ. ಭಾರತ ಕೇಸರಿ ಜರ್ಸಿಯಲ್ಲಿ ಆಡುವುದಿಲ್ಲ. ಮೆನ್ ಇನ್ ಬ್ಲೂನಲ್ಲೇ ಆಡಲಿದೆ ಎಂದು ಬಿಸಿಸಿಐ ಗೌರವ ಖಜಾಂಚಿ ಆಶಿಶ್ ಶೆಲಾರ್ ಸ್ಪಷ್ಟಪಡಿಸಿದ್ದಾರೆ.

ಐಸಿಸಿ ಪ್ರತಿ ತಂಡಕ್ಕೆ ಎರಡನೇ ಜರ್ಸಿ ಆಯ್ಕೆ ಕೊಟ್ಟಿದೆ. ಹೀಗಾಗಿ ಕೇಸರಿ ಜರ್ಸಿ ಈಗಾಗ್ಲೇ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಹಾಗೂ ಪ್ರಯಾಣದ ಸಂದರ್ಭದಲ್ಲಿ ಬಳಸುತ್ತಿದೆ. ಇದರ ಹೊರತುಪಡಿಸಿ ಯಾವುದೇ ಪಂದ್ಯದಲ್ಲಿ ಕೇಸರಿ ಜರ್ಸಿಯಲ್ಲಿ ಟೀಂ ಇಂಡಿಯಾ ಕಣಕ್ಕೆ ಇಳಿಯಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಅಪಪ್ರಚಾರಕ್ಕೆ ತೆರೆ ಎಳೆಯಲಾಗಿದೆ. 2019ರಲ್ಲಿ ಲಂಡನ್ ನಲ್ಲಿ ನಡೆದ ವಿಶ್ವಕಪ್ ನಲ್ಲಿ ಕೇಸರಿ ಜರ್ಸಿ ತೊಟ್ಟು ಆಡಿದ್ದರು. ಆಗ ತೀವ್ರ ವಿರೋಧ ವ್ಯಕ್ತವಾಗಿತ್ತು.




Leave a Reply

Your email address will not be published. Required fields are marked *

error: Content is protected !!