ಸ್ಯಾಂಟ್ರೋ ರವಿ ವಿರುದ್ಧ ಐಟಿ ಇಲಾಖೆಗೆ ದೂರು

270

ಪ್ರಜಾಸ್ತ್ರ ಸುದ್ದಿ

ಮೈಸೂರು: ಅಮಾಯಕ ಹೆಣ್ಣು ಮಕ್ಕಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳುತ್ತಿದ್ದ ಹಾಗೂ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ಅಕ್ರಮವೆಸಗುತ್ತಿದ್ದ ಕೆ.ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ಒಡನಾಡಿ ಸಂಸ್ಥೆ ದೂರು ಸಲ್ಲಿಸಿದೆ.

ಸಂಸ್ಥೆ ನಿರ್ದೇಶಕರುಗಳಾದ ಸ್ಟ್ಯಾನ್ಲಿ ಕೆ.ವಿ ಹಾಗೂ ಪರಶುರಾಮ್ ಎಂ.ಎಲ್ ಅವರು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದು, ಹಣ ಸಂಪಾದನೆಗಾಗಿ ಅಕ್ರಮ ದಾರಿಗಳನ್ನು ಹಿಡಿದಿದ್ದ ಸ್ಯಾಂಟ್ರೋ ರವಿ ಹೆಣ್ಮಕ್ಕಳನ್ನು ತನ್ನ ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ, ಅಕ್ರಮ ವರ್ಗಾವಣೆ, ಅಕ್ರಮ ಹಣ ಸಂಪಾದನೆ ಸೇರಿ ಹಲವು ಅಪರಾಧಿ ಕೆಲಸಗಳನ್ನು ಮಾಡಿದ್ದಾನೆ.

ಈತನನ್ನು 2005ರಲ್ಲಿ ಗೂಂಡಾ ಕಾಯ್ದೆ ಅಡಿ ಬಂಧಿಸಲಾಗಿದೆ. ಹೀಗಿದ್ದರೂ ರಾಜಕೀಯ ಮುಖಂಡರೊಂದಿಗೆ, ಅಧಿಕಾರಿಗಳೊಂದಿಗೆ ಶಾಮೀಲಾಗಿ ಬೆಂಗಳೂರು, ಮೈಸೂರಿನಲ್ಲಿ ಮನೆಗಳನ್ನು ಮಾಡಿದ್ದಾನೆ. ಹಣಕಾಸು ಸಂಸ್ಥೆಗಳನ್ನು ನಿರ್ಮಿಸಿ ಅಲ್ಲಿ ಕೆಲಸ ನೀಡುವುದಾಗಿ ಹೆಣ್ಮಕ್ಕಳನ್ನು ತನ್ನ ಕಾರ್ಯಸಾಧನೆಗೆ ಬಳಸಿಕೊಂಡಿದ್ದಾನೆ. ಇತನ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಿ ಎಂದು ದೂರು ಸಲ್ಲಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!