ಬಸ್ ಅಪಘಾತ: 40 ಪ್ರಯಾಣಿಕರ ದುರ್ಮರಣ

328

ಪ್ರಜಾಸ್ತ್ರ ಸುದ್ದಿ

ಸೆನೆಗಲ್: ಭೀಕರ ರಸ್ತೆ ಅಪಘಾತದಲ್ಲಿ ಬರೋಬ್ಬರಿ 40 ಪ್ರಯಾಣಿಕರು ಪ್ರಾಣ ಕಳೆದುಕೊಂಡ ಘಟನೆ ದಕ್ಷಿಣ ಆಫ್ರಿಕಾದ ಸೆನೆಗಲ್ ದೇಶದ ಡಾಕಾರ್ನ್ ನಲ್ಲಿ ನಡೆದಿದೆ. 85ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇದರಲ್ಲಿ ಅನೇಕರ ಸ್ಥಿತಿ ಚಿಂತಾಜನಕವಾಗಿದೆಯಂತೆ.

ಸಾರಿಗೆ ಬಸ್ ವೊಂದರ ಟೈರ್ ಪಂಕ್ಚರ್ ಆಗಿ ಎದುರಿಗೆ ಬರುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ನಡೆದಿದೆ. ಆಫ್ರಿಕಾ ಅಧ್ಯಕ್ಷ ಮ್ಯಾಕಿ ಸಾಲ್ ಸಂತಾಪ ಸೂಚಿಸಿದ್ದು, ಸೋಮವಾರದಿಂದ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!