ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

318

ಪ್ರಜಾಸ್ತ್ರ ಸುದ್ದಿ

ಕೇಪ್ ಟೌನ್: ಹೆಡರ್ ಓದಿ ಶಾಕ್ ಆಗ್ಬೇಡಿ ಅಥವ ಸುಳ್ಳೆಂದು ಹುಬ್ಬೇರಿಸಬೇಡಿ. ಯಾಕಂದ್ರೆ, ಇದು ನಂಬಲು ಅಸಾಧ್ಯವಾದ ಸುದ್ದಿ. ದಕ್ಷಿಣ ಆಫ್ರೀಕಾದಲ್ಲಿ 37 ವರ್ಷದ ಗೋಸಿಯಮ್ ಸಿಥೋಲ್ ಅನ್ನೋ ಮಹಿಳೆ ಬರೋಬ್ಬರಿ 10 ಮಕ್ಕಳಿಗೆ ಜನ್ಮ ನೀಡಿದ್ದಾಳೆ.

ಸಿಜಿರಿಯನ್ ಮೂಲಕ ಹೆರಿಗೆ ಮಾಡಲಾಗಿದ್ದು, 7 ಗಂಡು ಮಕ್ಕಳು ಹಾಗೂ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ ಆಗಿದ್ದಾಳೆ. ಈ ಕುರಿತು ದಕ್ಷಿಣ ಆಫ್ರೀಕಾ ಸ್ಥಳೀಯ ಪತ್ರಿಕೆ ವರದಿ ಮಾಡಿದೆ. ಈಕೆ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಇದರೊಂದಿಗೆ 12 ಮಕ್ಕಳ ತಾಯಿ ಆಗಿದ್ದಾಳೆ.

ಈ ಹಿಂದೆ 2009ರಲ್ಲಿ ಮೊರೊಕ್ಕೊದಲ್ಲಿ ನದಯಾ ಸುಲೇಮನ್ ಅನ್ನೋ ಮಹಿಳೆ 8 ಮಕ್ಕಳಿಗೆ ಜನ್ಮ ನೀಡಿದ್ದು ದಾಖಲೆಯಾಗಿತ್ತು. ಇದನ್ನ ಗೋಸಿಯಮ್ ಮುರಿದಿದ್ದಾಳೆ. ಈ ಬಗ್ಗೆ ಮಾತ್ನಾಡಿರುವ ಆಕೆ, ಆರಂಭದಲ್ಲಿ ನಾನು ಆಘಾತಕ್ಕೆ ಒಳಗಾಗಿದ್ದೆ. ಅನಾರೋಗ್ಯಕ್ಕೆ ತುತ್ತಾಗಿದ್ದೆ. ಸಾಕಷ್ಟು ಕಷ್ಟಗಳನ್ನು ಎದುರಿಸಿದ್ದೇನೆ. ದೇವರಲ್ಲಿ ಒಂದೇ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೆ, ನನ್ನ ಮಕ್ಕಳು ಆರೋಗ್ಯವಾಗಿರ್ಲಿ. ಜೀವಂತವಾಗಿ ಜನಿಸಲಿ ಎಂದು. ಈಗ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾಳೆ.




Leave a Reply

Your email address will not be published. Required fields are marked *

error: Content is protected !!