ಕೊಹ್ಲಿ ಆಟಕ್ಕೆ ಹರಿಣಿಗಳು ಕಕ್ಕಾಬಿಕ್ಕಿ.. ಅಬ್ಬರಿಸಿದ ಜಡೇಜಾ…

408

ಪುಣೆ: ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಸ್ಕೋರ್ ಮಾಡಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 601ಕ್ಕೆ 5 ವಿಕೆಟ್ ಕಳೆದುಕೊಂಡು ಡಿಕ್ಲೇರ್ ಮಾಡಿಕೊಂಡಿತು. ಬಳಿಕ ಬ್ಯಾಟಿಂಗ್ ನಡೆಸಿದ ಸೌಥ್ ಆಫ್ರಿಕಾ 36ಕ್ಕೆ 3 ವಿಕೆಟ್ ಕಳೆದುಕೊಂಡಿದೆ.

ಭಾರತ ಪರ ಮಯಾಂಕ 108, ಚೆತೇಶ್ವರ ಪುಜಾರ 58, ಕ್ಯಾಪ್ಟನ್ ಕೊಹ್ಲಿ 254, ಅಜಿಂಕೆ ರಹಾನೆ 59, ರವೀಂದ್ರ ಜಡೇಜಾ 91 ರನ್ ಬಾರಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ನಡೆಸಿದ್ರು. ಕಗ್ಸೋ ರಬ್ಡಾ 3 ವಿಕೆಟ್ ಪಡೆದು ಮಿಂಚಿದ್ರು. ಕೇಶವ ಮಹರಾಜ ಹಾಗೂ ಮುನಿಸ್ವಾಮಿ ತಲಾ 1 ವಿಕೆಟ್ ಪಡೆದ್ರು.

ಇನ್ನು ಸೌಥ್ ಆಫ್ರಿಕಾ ಬ್ಯಾಟಿಂಗ್ ಶುರು ಮಾಡಿ 36 ರನ್ ಗಳಿಸುವಷ್ಟರಲ್ಲಿಯೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿದೆ. ಡೀನ್ ಎಲ್ಗರ್ 6, ಮಾರ್ಕರ್ಮ್ 0, ತೆಂಬಾ ಬವುಮ್ 8 ರನ್ ಗಳಿಸಿ ಔಟ್ ಆಗಿದ್ದಾರೆ. ಬ್ರೂಯಾನ್ 20 ರನ್ ಹಾಗೂ ನೊರ್ಟಜ್ 2 ರನ್ ಗಳಿಸಿ ಆಡ್ತಿದ್ದಾರೆ. ಉಮೇಶ ಜಾಧವ 2 ಹಾಗೂ ಶೆಮಿ 1 ವಿಕೆಟ್ ಪಡೆದು ಸೌಥ್ ಆಫ್ರಿಕಾಗೆ ಆರಂಭಿಕ ಆಘಾತ ನೀಡಿದ್ದಾರೆ.

ಕೊಹ್ಲಿ 7000 ರನ್

ನಾಯಕ ವಿರಾಟ ಕೊಹ್ಲಿ ವೇಗವಾಗಿ 7 ಸಾವಿರ ರನ್ ಪೂರೈಸಿದ ನಾಲ್ಕನೇ ಬ್ಯಾಟ್ಸಮನ್ ಆಗಿದ್ದಾರೆ. ಈ ಸಾಧನೆ ಮಾಡಲು ಕೊಹ್ಲಿ 138 ಇನ್ನಿಂಗ್ಸ್ ಆಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!