ಕಂಪ್ಲೇಟ್ ಕೊಡಲು ಬಂದವಳ ಜೊತೆಯೇ ಪಿಎಸ್ಐ ಡಿಂಗ್ ಡಾಂಗ್

479

ದಾವಣಗೆರೆ: ಯಾವುದೋ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳ ಮಾಡಿಕೊಂಡು ಠಾಣೆ ಮೆಟ್ಟಿಲು ಏರಿದ ಮಹಿಳೆಯನ್ನ ಗಂಡನಿಂದ ದೂರ ಮಾಡಿ, ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಪಿಎಸ್ಐ ವಿರುದ್ಧ ಕೇಸ್ ದಾಖಲಾಗಿದೆ.

ಪಿಎಸ್ಐ ರಾಜೇಂದ್ರ ನಾಯ್ಕ, ಹದಡಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ಟೈಂನಲ್ಲಿ ಕೌಟುಂಬಿಕ ಕಲಹವೊಂದು ಬಂದಿದೆ. ಆ ದಂಪತಿಯನ್ನ ಒಂದು ಮಾಡುವ ಬದ್ಲು, ಅವರಿಬ್ಬರನ್ನ ದೂರ ಮಾಡಲು ನೋಡಿದ್ದಾನೆ. ಒಂದು ಮಗುವಿನ ತಾಯಿ ಜೊತೆ ಅಕ್ರಮ ಸಂಬಂಧ ಬೆಳಸಿ ಬೇರೊಂದು ಮನೆ ಮಾಡಿಟ್ಟಿದ್ದಾನೆ. ವಿವಾಹಿತ ಪಿಎಸ್ಐ ರಾಜೇಂದ್ರ ನಾಯ್ಕನ ಅಕ್ರಮ ಸಂಬಂಧದಲ್ಲಿ ಬಿರುಕು ಮೂಡಿ ಠಾಣೆ ಮೆಟ್ಟಿಲು ಏರಿದೆ.

ಸದ್ಯ ಹಾವೇರಿ ಜಿಲ್ಲೆಯ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸ್ತಿರುವ ಪಿಎಸ್ಐ ವಿರುದ್ಧ ಕೇಸ್ ದಾಖಲಾಗಿದೆ. ಇತ್ತ ಆ ಮಹಿಳೆ ವಿರುದ್ಧ ಪಿಎಸ್ಐ ಪತ್ನಿ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.




Leave a Reply

Your email address will not be published. Required fields are marked *

error: Content is protected !!