ಅನೈತಿಕ ಸಂಬಂಧ: ತೋಟದಲ್ಲಿ ಸಿಕ್ಕಿಬಿದ್ದ ಜೋಡಿ

533

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ವಿವಾಹವಾಗಿದ್ದ ಮಹಿಳೆ ಯುವಕನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದು ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಆ ಜೋಡಿಯನ್ನ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿ ಶಿಕ್ಷೆ ನೀಡಿದ್ದಾರೆ. ಚುಂಚನೂರು ಗ್ರಾಮದ ಭೀಮಸಿ ಹಾಗೂ ಮುರಕಟನಾಳದ ಲಕ್ಷ್ಮಿ ಅನ್ನೋ ಮಹಿಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಲಕ್ಷ್ಮೀ ಕಳೆದ ತಡರಾತ್ರಿ ಮನೆಯಿಂದ ಹೊರ ನಡೆದಿದ್ದಾಳೆ. ಗ್ರಾಮದ ಹೊರಗಿನ ಹೊಲವೊಂದರಲ್ಲಿ ಭೀಮಸಿಯನ್ನ ಭೇಟಿಯಾಗಿದ್ದಾಳೆ. ಅನುಮಾನಗೊಂಡು ಕುಟುಂಬಸ್ಥರು ಹಿಂಬಾಲಿಸಿಕೊಂಡು ಬಂದಿದ್ದಾರೆ. ಆಗ ಈ ಜೋಡಿ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ್ಲೇ ಸಿಕ್ಕಿಬಿದ್ದಿದ್ದು, ಗ್ರಾಮಕ್ಕೆ ಕರೆದುಕೊಂಡು ಬಂದು ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿ ಬುದ್ದಿ ಕಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!