ನಾಯಿಯ ಅಕ್ರಮ ಸಂಬಂಧವಂತೆ, ಮಾಲೀಕ ಮಾಡಿದ್ದೇನು ಗೊತ್ತಾ?

545

ತಿರುವನಂತಪುರಂ: ಈ ಭೂಮಿ ಮೇಲೆ ಎಂಥಾ ಭೂಪರು ಇರ್ತಾರೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ನೋಡಲು ಎಷ್ಟೊಂದು ಮುದ್ದಾಗಿರುವ ಈ ನಾಯಿ ಬೀದಿಗೆ ಬಿದ್ದಿದೆ. ಶಾಕ್ ಆಗ್ಬೇಡಿ. ಇದು ಸಾಕಿದ ಮೂರು ವರ್ಷದ ಪೊಮೆರಿಯನ್ ತಳಿಯ ನಾಯಿ. ಅದು ಪಕ್ಕದ ಮನೆಯ ನಾಯಿ ಜೊತೆ ಅಕ್ರಮ ಸಂಬಂಧ ಹೊಂದಿದೆಯಂತೆ. ಇದನ್ನ ಓದಿದ ಯಾರಿಗಾದ್ರೂ ನಗು ತೆಡೆದುಕೊಳ್ಳಲು ಆಗೋದಿಲ್ಲ.

ನಾಯಿಯ ಕುತ್ತಿಗೆಗೆ ಕಟ್ಟಲಾಗಿದ್ದ ಚೀಟಿ

ತಿರುವನಂತಪುರಂನ ಚೆಕಾಯ್ ಮಾರ್ಕೆಟ್ ನಲ್ಲಿ ಮುದ್ದಾದ ನಾಯಿ ಏಕಾಂಗಿಯಾಗಿ ನಿಂತಿತ್ತು. ಇದನ್ನ ನೋಡಿದ ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆಯ ಸ್ವಯಂಸೇವಕ, ಅದರ ಬಳಿ ಹೋಗಿದ್ದಾನೆ. ಅದನ್ನು ಎತ್ತಿಕೊಂಡು ನೋಡಿದಾಗ ಅದರ ಕೊರಳಲ್ಲಿ ಚೀಟಿಯೊಂದು ಕಟ್ಟಲಾಗಿತ್ತು. ಅದರಲ್ಲಿ ಹೀಗೆ ಬರೆಯಲಾಗಿದೆ.

ಇದು ಉತ್ತಮ ತಳಿಯ ನಾಯಿ. ಒಳ್ಳೆಯ ನಡವಳಿಕೆ ಹೊಂದಿದ ನಾಯಿಗೆ ಯಾವುದೇ ರೋಗಗಳಿಲ್ಲ. ಇದಕ್ಕೆ ವಾರದಲ್ಲಿ ಐದು ದಿನ ಸ್ನಾನ ಮಾಡಿಸಲಾಗ್ತಿತ್ತು. ಮೂರು ವರ್ಷದಲ್ಲಿ ಯಾರನ್ನೂ ಕಚ್ಚಿಲ್ಲ. ಹಾಲು, ಬಿಸ್ಕೆಟ್, ಮೊಟ್ಟೆಯನ್ನ ಹೆಚ್ಚಾಗಿ ತಿನ್ನುತ್ತೆ. ಪಕ್ಕದ ಮನೆಯ ನಾಯಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಕಾರಣ, ಇದನ್ನ ಮನೆಯಿಂದ ಹೊರ ಹಾಕಿದ್ದೇನೆ ಅಂತಾ ಬರೆಯಲಾಗಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅನಾಮಿಕ ಮಾಲೀಕನ ಬಗ್ಗೆ ಟೀಕೆಗಳು ವ್ಯಕ್ತವಾಗ್ತಿವೆ. ನಾಯಿಯ ಸ್ಥಿತಿಯನ್ನ ಅರ್ಥ ಮಾಡಿಕೊಳ್ಳದವನು. ಪ್ರಾಣಿಗಳು ಬೆದೆಗೆ ಬಂದಾಗ ಸಹಜವಾಗಿ ಸಂಗಾತಿಯನ್ನ ಹುಡುಕಿಕೊಳ್ಳುತ್ತವೆ. ಇದು ಪ್ರಕೃತಿಯ ನಿಯಮ. ಇದನ್ನ ಅರಿಯದ ಆ ಮನುಷ್ಯ ಮಾನಸಿಕ ಅಸ್ವಸ್ಥನಿರಬೇಕು. ನಾಯಿಗೆ ಅಕ್ರಮ ಸಂಬಂಧವೇ.. ಈ ರೀತಿಯ ಸಂಬಂಧ ಇರೋದಾದ್ರೆ, ಮಾಲೀಕ ಅದಕ್ಕೆ ಮದುವೆ ಮಾಡಿಸಬೇಕಿತ್ತು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಪೀಪಲ್ ಫಾರ್ ಎನಿಮಲ್ಸ್ ಸಂಸ್ಥೆ ನಾಯಿಗೆ ಆಶ್ರಯ ನೀಡಿದ್ದು, ವಿಚಿತ್ರ ಮಾಲೀಕನ ಹುಡುಕಾಟ ನಡೆಸಿದೆ.




Leave a Reply

Your email address will not be published. Required fields are marked *

error: Content is protected !!