ಸಾರಿಗೆ ನೌಕರರ ಮುಷ್ಕರ.. ಸಚಿವ ಸವದಿ ವಿಫಲ!

271

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕಳೆದ 8 ದಿನಗಳಿಂದ ಸಾರಿಗೆ ನೌಕರರು ರಾಜ್ಯದಲ್ಲಿ ಮುಷ್ಕರ ನಡೆಸ್ತಿದ್ದಾರೆ. ಜನರ ಪರದಾಟ ಮುಂದುವರೆದಿದೆ. ಖಾಸಗಿ ವಾಹನಗಳ ದರ್ಬಾರ್ ಜೋರಾಗಿದೆ. ಹೀಗಿದ್ರೂ ಈ ಸಮಸ್ಯೆಯನ್ನು ಬಗೆಹರಿಸುವಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ಯಡವಿದೆ. ಅದರಲ್ಲೂ ಸಾರಿಗೆ ಸಚಿವ, ಡಿಸಿಎಂ ಲಕ್ಷ್ಮಣ ಸವದಿ ಅವರು ಪೂರ್ತಿ ಫೇಲ್ ಆಗಿದ್ದಾರೆ.

ಈ ಹಿಂದೆಯೂ ಇದೆ ರೀತಿ ನೌಕರರ ಮುಷ್ಕರ ನಡೆಸಿ ಸಾರ್ವಜನಿಕರು ಸಾಕಷ್ಟು ಕಷ್ಟ ಎದುರಿಸಿದ್ದರು. ಈಗ ಕಳೆದ 8 ದಿನಗಳಿಂದ ಮುಷ್ಕರ ನಡೆಯುತ್ತಿದ್ದರೂ ಗಂಭೀರವಾಗಿ ಪರಿಗಣಿಸದೆ ಇರೋದು ನಿಜಕ್ಕೂ ದುರಂತ. ಸಾರಿಗೆ ಸಚಿವರು ಉಪ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಷ್ಟು ಮುಷ್ಕರದ ವಿಚಾರದಲ್ಲಿ ತೊಡಗಿಸಿಕೊಂಡಿದ್ರೆ ಈಗಾಗ್ಲೇ ಬಗೆಹರಿದು ಹೋಗಬೇಕಿತ್ತು ಎಂದು ಜನರು ಕಿಡಿ ಕಾರುತ್ತಿದ್ದಾರೆ.

ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ವಾಹನಗಳು ಬಂದು ನಿಲ್ಲುತ್ತಿವೆ. ಡಬಲ್, ತ್ರಿಬಲ್ ದರ ನಿಗದಿ ಪ್ರಯಾಣಿಕರನ್ನು ಕರೆದುಕೊಂಡು ಹೋಗ್ತಿದ್ದಾರೆ. ಅಲ್ಲೊಂದು ಇಲ್ಲೊಂದು ಸರ್ಕಾರಿ ಬಸ್ ಬಿಟ್ಟರೆ ಮತ್ತೇನೂ ಇಲ್ಲ. ಇದನ್ನು ನೋಡ್ತಿರುವ ಜನರು ರಸ್ತೆ ಸಾರಿಗೆಯನ್ನ ಸಹ ಖಾಸಗೀಕರಣ ಮಾಡಲು ಹೊರಟಿರುವ ಪ್ಲಾನ್ ಎನ್ನುತ್ತಿದ್ದಾರೆ. ಸಾರಿಗೆ ನೌಕರರ ಮುಷ್ಕರ ಮಾಡ್ತಿದ್ದಾರೆ. ಹಾಗಂತ ಖಾಸಗಿ ವಾಹನಗಳು ಬಸ್ ನಿಲ್ದಾಣದಲ್ಲಿ ತಂದು ನಿಲ್ಲಿಸುವ ಮೂಲಕ ಬೇಕಾಬಿಟ್ಟಿಯಾಗಿ ಹಣ ಸೂಲಿಗೆ ಮಾಡ್ತಿರುವುದು ಎಷ್ಟು ಸರಿ? ಈ ಬಗ್ಗೆ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಯಾಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಆಗ್ತಿಲ್ಲ ಅಂತಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ನೋಡಿದ್ರೆ ಮೂರು ತಿಂಗಳು ಮುಷ್ಕರ ಮಾಡಿದ್ರೂ 6ನೇ ವೇತನ ಸಾಧ್ಯವಿಲ್ಲವೆಂದು ಹೇಳಿದ್ದಾರೆ. ಸಚಿವರು ನೋಡಿದ್ರೆ ಎಲ್ಲ ಬಗೆಹರಿಯುತ್ತೆ ಅಂತಾರೆ. ಜನರು ಇದು ಹೇಗೆ ಸಾಧ್ಯ ಅಂತಿದ್ದಾರೆ. ಸಿಬ್ಬಂದಿ ಮನವೊಲಿಸಿ ಮುಷ್ಕರ ಹಿಂದಕ್ಕೆ ಪಡೆಯಲು ಆಗ್ತಿಲ್ಲವೆಂದರೆ ಸಾರಿಗೆ ಮಂತ್ರಿ ಅವರು ಇರೋದ್ಯಾಕೆ ಅನ್ನೋ ಪ್ರಶ್ನೆ ಮೂಡಿದೆ. ಕೂಡಲೇ ಸಚಿವ ಲಕ್ಷ್ಮಣ ಸವದಿ ಅವರು ಈ ಬಗ್ಗೆ ಗಂಭೀರವಾದ ಚರ್ಚೆ ಮಾಡಿ ಬಸ್ ಸಂಚಾರವಾಗುತ್ತೆ ಮಾಡಬೇಕು. ಇಲ್ಲದೆ ಹೋದ್ರೆ ಜನರು ರೊಚ್ಚಿಗೆಳುವುದರಲ್ಲಿ ಅನುಮಾನವಿಲ್ಲ.




Leave a Reply

Your email address will not be published. Required fields are marked *

error: Content is protected !!