ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾಗೆ ಪ್ರಧಾನಿ ಪ್ರಯಾಣ

224

ಪ್ರಜಾಸ್ತ್ರ ಸುದ್ದಿ

ನವದೆಹಲಿ: 15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮಂಗಳವಾರ ದಕ್ಷಿಣ ಆಫ್ರಿಕಾಕ್ಕೆ ತೆರಳಿದರು. ಈ ಬಾರಿ ಶೃಂಗಸಭೆಯ ನೇತೃತ್ವವನ್ನು ದಕ್ಷಿಣ ಆಫ್ರಿಕಾ ವಹಿಸಿಕೊಂಡಿದೆ. ಬ್ರಿಕ್ಸ್ ಅಧ್ಯಕ್ಷರು ಇದೆ ದೇಶದವರಾಗಿದ್ದಾರೆ. ಆಫ್ರಿಕಾ ಪ್ರಧಾನಿ ಮಟಮೇಲಾ ಸಿರಿಲ್ ರಾಮಫೋಸಾ ಅವರ ಆಹ್ವಾನ ಮೇರೆಗೆ ಭಾರತದ ಪ್ರಧಾನಿ ತೆರಳಿದ್ದಾರೆ.

ಭಾರತ ಹಾಗೂ ಆಫ್ರಿಕಾ ನಡುವೆ ರಾಜತಾಂತ್ರಿಕ ಸಂಬಂಧಕ್ಕೆ ಇದು 30 ವರ್ಷಗಳ ಪ್ರತೀಕವಾಗಿದೆ. ವಾಣಿಜ್ಯೋದ್ಯಮ, ವ್ಯಾಪಾರ ಮಂಡಳಿ, ಮಹಿಳಾ ವ್ಯಾಪಾರ ಒಕ್ಕೂಟ ಸೇರಿದಂತೆ ಹಲವು ಸಭೆಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ.

ಬ್ರಿಕ್ಸ್ ನ ಭಾಗವಾಗಿರುವ ಬ್ರೆಜಿಲ್, ರಷ್ಯಾ, ಚೀನಾ ದೇಶಗಳ ಮುಖ್ಯಸ್ಥರು ಇದರಲ್ಲಿ ಭಾಗವಹಿಸಲಿದ್ದು, ಅಂತಾರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ಮೂರು ದಿನಗಳ ಕಾಲ ಚರ್ಚೆ ನಡೆಯಲಿವೆ.




Leave a Reply

Your email address will not be published. Required fields are marked *

error: Content is protected !!