ನನ್ನ ಅಪಹರಣದ ಹಿಂದೆ ಪ್ರೇಯಿಸಿ ಕೈವಾಡ

235

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನನ್ನ ಅಪಹರಣದ ಹಿಂದೆ ಪ್ರೇಯಿಸಿ ಕೈವಾಡವಿದೆ ಎಂದು ಮೆಹುಲ್ ಚೋಕ್ಸಿ ಹೇಳಿದ್ದಾನೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬರೋಬ್ಬರಿ 13,500 ಕೋಟಿ ರೂಪಾಯಿ ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ, ಮೆಹುಲ್ ಚೋಕ್ಸಿ, ಆಂಟಿಗುವಾ ಪೊಲೀಸ್ ಕಮಿಷನರ್ ಗೆ ನೀಡಿರುವ ದೂರಿನಲ್ಲಿ ಪ್ರೇಯಿಸಿ ವಿರುದ್ಧ ಈ ರೀತಿ ಹೇಳಿದ್ದಾನೆ.

ಕಳೆದ ವರ್ಷದಿಂದ ಆಕೆ ನನಗೆ ಗೊತ್ತು. ನನ್ನ ಮನೆಯ ಕೆಲಸಗಾರರ ಜೊತೆಗೆ ಸಲುಗೆಯಿಂದ ಆಕೆ ನನಗೂ ಪರಿಚಯವಾದ್ಳು. ಆಗಾಗ ಭೇಟಿಯಾಗುತ್ತಿದ್ದೇವು. ಸಂಜೆ ವಾಕಿಂಗ್ ಹೋಗುತ್ತಿದ್ದೇವು. ಮೇ 23ರಂದು ಸಂಜೆ ಮನೆಯಿಂದ ಪಿಕ್ ಮಾಡಲು ಹೇಳಿದ್ಳು. ಅದರಂತೆ ಹೋದೆ. ಆಕೆ ವೈನ್ ಕುಡಿಯುತ್ತಿದ್ದಳು. ಅದನ್ನು ಮುಗಿಸಿ ಹೋಗೋಣವೆಂದ್ಳು. ಅಷ್ಟರಲ್ಲಿ 8-10 ಜನರು ಬಂದು, ಆಂಟಿಗುವಾ ಪೊಲೀಸರೆಂದು ಹೇಳಿ, ಠಾಣೆಗೆ ಬರಲು ಹೇಳಿದ್ರು.

ನಾನು ನನ್ನ ವಕೀಲರಿಗೆ ಸಂಪರ್ಕಿಸುವುದಾಗಿ ಹೇಳಿದ್ರೂ ಬಿಡ್ಲಿಲ್ಲ. ಹಲ್ಲೆ ಮಾಡಿದ್ರು. ನಂತರ ನನ್ನ ಗೆಳತಿ ಬಾರ್ಬರಾ ಜರಾಬಿಕಾ ಮನೆಯ ಹಿಂದೆ ಕರೆದುಕೊಂಡು ಹೋಗಿ ಸಣ್ಣ ಹಡಗಿನಲ್ಲಿ ಹಾಕಿದ್ರು. ಆಗ ನನ್ನ ಗೆಳತಿ ನನ್ನ ಸಹಾಯಕ್ಕೆ ಬರ್ಲಿಲ್ಲ. ಪೊಲೀಸರನ್ನ ಸಂಪರ್ಕಿಸುವ ಕೆಲಸ ಮಾಡಿಲ್ಲ. ಹೀಗಾಗಿ ಇದರ ಹಿಂದೆ ಕೈವಾಡವಿದೆ ಎಂದು ದೂರಿನಲ್ಲಿ ತಿಳಿಸಿದ್ದಾನೆ. ಆದ್ರೆ, ಇದರಲ್ಲಿ ನನ್ನ ಕೈವಾಡ ಇಲ್ಲವೆಂದು ಜರಾಬಿಕಾ ಹೇಳಿದ್ದಾಳೆ.




Leave a Reply

Your email address will not be published. Required fields are marked *

error: Content is protected !!