ಮೋದಿ, ಮಲ್ಯ, ಚೋಕ್ಸಿ ಅರ್ಧದಷ್ಟು ಆಸ್ತಿ ಜಪ್ತಿ

232

ಪ್ರಜಾಸ್ತ್ರ ಸುದ್ದಿ

ನವದೆಹಲಿ: ದೇಶದಲ್ಲಿನ ವಿವಿಧ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ವಿದೇಶಕ್ಕೆ ಪಲಾಯನ ಮಾಡಿರುವ ಉದ್ಯಮಿಗಳಾದ ನೀರವ ಮೋದಿ, ವಿಜಯ ಮಲ್ಯಾ ಹಾಗೂ ಮೆಹುಲ್ ಚೋಕ್ಸಿಗೆ ಸಂಬಂಧ ಜಾರಿ ನಿರ್ದೇಶನಾಲಯ(ಇಡಿ) ಅರ್ಧದಷ್ಟು ಆಸ್ತಿಯನ್ನ ಜಪ್ತಿ ಮಾಡಿದೆ.

ಈ ಮೂವರು ಉದ್ಯಮಿಗಳಿಗೆ ಸಂಬಂಧಿಸಿದ 18,170 ಕೋಟಿ ಆಸ್ತಿಯನ್ನ ವಶಪಡಿಸಿಕೊಳ್ಳಲಾಗಿದೆ. ಅಲ್ದೇ, 9,371.17 ಕೋಟಿ ರೂಪಾಯಿಗಳನ್ನ ಬ್ಯಾಂಕ್ ಗಳಿಗೆ ಹಾಗೂ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಇಡಿ ಬುಧವಾರ ತಿಳಿಸಿದೆ. ಇಡಿ ಸಹಾಯದಿಂದ ಷೇರು ಮಾರಾಟ ಮಾಡುವ ಮೂಲಕ 1,357 ಕೋಟಿ ರೂಪಾಯಿಗಳನ್ನ ಮರಳಿ ಪಡೆದುಕೊಳ್ಳಲಾಗಿದೆ.

ಇನ್ನೊಂದು ವಾರದೊಳಗೆ ಆಸ್ತಿಯ ಒಂದು ಭಾಗ ಮಾರಾಟ ಮಾಡುವ ಮೂಲಕ 7,981.5 ಕೋಟಿ ರೂಪಾಯಿಗಳನ್ನ ಸಹಕಾರಗೊಳಿಸಲಾಗುತ್ತೆ. ಬ್ಯಾಂಕಿಗೆ ಒಟ್ಟು ನಷ್ಟದ ಶೇಕಡ 40ರಷ್ಟು ಮೌಲ್ಯದ ಆಸ್ತಿಯನ್ನ ಬ್ಯಾಂಕ್ ಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!