ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಸೋಮವಾರ ಇದ್ದಿಕ್ಕಿದಂತೆ ನಟ ಜಗ್ಗೇಶ ಅವರ ಮೇಲೆ ಡಿ ಬಾಸ್ ದರ್ಶನ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅವರ ತೋತಾಪುರಿ ಶೂಟಿಂಗ್ ಸೆಟ್ ನಲ್ಲಿಯೇ ಜಗ್ಗೇಶಗೆ ಬಾಯಿಗೆ ಬದ್ದಂತೆ ಮಾತ್ನಾಡಿದ್ದಾರೆ. ಕ್ಷಮೆ ಕೇಳಲು ಆಗ್ರಹಿಸಿದ್ದಾರೆ.
ಜಾಹೀರಾತು ನೀಡುವ ವಿಚಾರ ಸಂಬಂಧ ನಟ ಜಗ್ಗೇಶ ನಿರ್ಮಾಪಕರೊಬ್ಬರ ಜೊತೆ ಮಾತ್ನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ನಲ್ಲಿ ನಟ ದರ್ಶನ ಬಗ್ಗೆ ಕೆಟ್ಟದಾಗಿ ಮಾತ್ನಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಇದನ್ನ ತಳ್ಳಿ ಹಾಕಿರುವ ಅವರು, ನಾನು ಮಾತ್ನಾಡಿಲ್ಲ. ಅದು ನನ್ನ ಧ್ವನಿ ಅಲ್ಲ. ಇದರಲ್ಲಿ ದೊಡ್ಡ ಹುನ್ನಾರವಿದೆ ಎಂದು ಜಗ್ಗೇಶ ಹೇಳ್ತಿದ್ದರೂ ಯಾರೂ ಕೇಳಿಸಿಕೊಳ್ಳದೆ ಇರುವ ಸ್ಥಿತಿಯಲ್ಲಿ ಪರಿಸ್ಥಿತಿ ತಲುಪಿರುವುದು ಕಂಡು ಬಂದಿದೆ.