ಪ್ರಜಾಸ್ತ್ರ ಸಿನಿಮಾ ಡೆಸ್ಕ್
ತಮಿಳು ನಟ ಧನುಷ್ ನಟನೆಯ ಚಿತ್ರವೊಂದರ ಶೂಟಿಂಗ್ ವೇಳೆ ನಟ ಪ್ರಕಾಶ ರೈ ಅವರ ಕೈಗೆ ಗಂಭೀರ ಗಾಯವಾಗಿದೆ. ಸಾಹಸ ದೃಶ್ಯದ ಶೂಟಿಂಗ್ ವೇಳೆ ಅನಾಹುತ ನಡೆದಿದೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಚೆನ್ನೈನಿಂದ ಹೈದ್ರಾಬಾದ್ ಗೆ ಬಂದು ಅವರ ಸ್ನೇಹಿತರಾದ ಡಾ.ಗುರುವರೆಡ್ಡಿ ಅವರ ಬಳಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ನಟ ರೈ ಟ್ವೀಟ್ ಮಾಡಿದ್ದು, ಭಯ ಪಡುವಂತದ್ದು ಏನೂ ಇಲ್ಲ. ಯಾರೂ ಆತಂಕ ಪಡುವುದು ಬೇಡ ಎಂದಿದ್ದಾರೆ.