ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ನಂಬರ್ ನೀಡಿದ ನಟ ರಮೇಶ್

209

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ತಮ್ಮ ನೆಚ್ಚಿನ ನಟ, ನಟಿಗೆ ಹುಟ್ಟು ಹಬ್ಬದ ಶುಭಾಶಯವನ್ನು ನೇರವಾಗಿ ತಿಳಿಸಬೇಕು ಅನ್ನೋದು ಅಭಿಮಾನಿಗಳು ಆಸೆಯಾಗಿರುತ್ತೆ. ಆದರೆ, ಸಿನಿಮಾ ತಾರೆಯರು ಫೋನ್ ನಂಬರ್ ಎಲ್ಲಿಯೂ ಶೇರ್ ಮಾಡುವುದಿಲ್ಲ. ಆದರೆ, ಇದೆ ಮೊದಲ ಬಾರಿಗೆ ನಟ ರಮೇಶ್ ಅರವಿಂದ್ ಅವರು, ವಾಟ್ಸಪ್ ನಂಬರ್ ನೀಡಿದ್ದಾರೆ.

ಸೆಪ್ಟೆಂಬರ್ 10 ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬ. ಅಂದು ಅವರಿಗೆ ವಾಟ್ಸಪ್ ನಲ್ಲಿ ವಿಶ್ ಮಾಡಲು ನಂಬರ್ ನೀಡಿದ್ದಾರೆ. 8951599009 ಹಾಗೂ 8951699009 ನಂಬರ್ ನೀಡಿದ್ದಾರೆ. ವಿಶ್ ಮಾಡುವುದು ಮಾತ್ರವಲ್ಲ, ಅವರಿಗೆ ಪ್ರಶ್ನೆ ಸಹ ಕೇಳಬಹುದು. ಅವರು ಅದಕ್ಕೆ ಉತ್ತರಿಸಲಿದ್ದಾರೆ. ತುಂಬಾ ವಿಭಿನ್ನವಾಗಿ ವಿಶ್ ಮಾಡಿದವರಿಗೆ ಸ್ವತಃ ರಮೇಶ್ ಅರವಿಂದ್ ಫೋನ್ ಮಾಡಿ ಮಾತನಾಡಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!