ಹಿರಿಯ ನಟ, ಲೇಖಕ ಎಚ್.ಜಿ ಸೋಮಶೇಖರ ನಿಧನ

303

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಹಿರಿಯ ನಟ, ಲೇಖಕಿ ಎಚ್.ಜಿ ಸೋಮಶೇಖರ ಅವರು ನಿಧನರಾಗಿದ್ದಾರೆ. 86 ವರ್ಷದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು ನಿಧನರಾಗಿದ್ದಾರೆ.

ಬ್ಯಾಂಕ್ ಅಧಿಕಾರಿಯಾಗಿದ್ದ ಎಚ್.ಜಿ ಸೋಮಶೇಖರ ಅವರು, ರಂಗಭೂಮಿ, ಸಿನಿಮಾ, ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ರು. ಹರಕೆಯ ಕುರಿ ಚಿತ್ರದ ಅಭಿನಯಕ್ಕಾಗಿ 1992-93ರಲ್ಲಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದಿದ್ದಾರೆ.

2017ರಲ್ಲಿ ‘ಸೋಮಣ್ಣನ ಸ್ಟಾಕ್’ನಿಂದ ಅನ್ನೋ ಆತ್ಮಕಥೆ ಬಿಡುಗಡೆಯಾಗಿದೆ. ಇವರ ನಿಧನಕ್ಕೆ ಸಾಹಿತ್ಯ, ರಂಗಭೂಮಿ, ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಎಚ್.ಜಿ ಸೋಮಶೇಖರ ಅವರು ಹಿರಿಯ ನಟ ದತ್ತಣ್ಣನವರ ಸಹೋದರರಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!