ಯುವ ನಟಿ ಆತ್ಮಹತ್ಯೆಗೆ ಏನು ಕಾರಣ?

166

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಚೆನ್ನೈ: ಯುವ ನಟಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ. ನಟಿ ದೀಪಾ ಅಲಿಯಾಸ್ ಪಾಲಿನ್ ಆತ್ಮಹತ್ಯೆ ಮಾಡಿಕೊಂಡ ನಟಿಯಾಗಿದ್ದಾಳೆ. ವಿರುಗಂಬಾಕ್ಕಂನಲ್ಲಿರುವ ಖಾಸಗಿ ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದು, ಡೆತ್ ನೋಟ್ ಬರೆದಿಟ್ಟಿದ್ದಾರೆ.

ನಟಿ ದೀಪಾ ಸಾವಿಗೆ ಪ್ರೇಮ ಪ್ರಕರಣ ಕಾರಣವೆಂದು ಹೇಳಲಾಗುತ್ತಿದೆ. ತನ್ನ ಸಾವಿಗೆ ಯಾರೂ ಕಾರಣಲ್ಲ. ನಾನು ಒಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೆ. ಆದರೆ, ಅದು ಸರಿಯಾಗಿ ನಡೆಯಲಿಲ್ಲ. ಜೀವನಪರ್ಯಂತ ಅವರನ್ನು ಪ್ರೀತಿಸುತ್ತಲೇ ಇರುತ್ತೇನೆ ಎಂದು ಡೆತ್ ನೋಟ್ ನಲ್ಲಿದೆಯಂತೆ. ದೀಪಾ ಸಹೋದರ ದಿನೇಶ್ ಕೊಯಂಬೇಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನಾಸರ್ ಅಭಿನಯದ ವೈಥಾ ಸಿನಿಮಾ ಮೂಲಕ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಯುವ ನಟಿಯ ಸಾವು ಕಾಲಿವುಡ್ ಅಂಗಳದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.




Leave a Reply

Your email address will not be published. Required fields are marked *

error: Content is protected !!