ರಮ್ಯಾ ಪೊಲೀಸ್ ಠಾಣೆಗೆ ಬಂದಿದ್ಯಾಕೆ?

413

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಜಕೀಯಕ್ಕೆ ಪ್ರವೇಶಿಸಿ, ಸಂಸದೆಯಾದ ಮೇಲೆ ಸಿನಿಮಾದಿಂದ ದೂರವಾಗಿದ್ದರು ನಟಿ ರಮ್ಯಾ ಮೇಲಿನ ಅಭಿಮಾನಿ, ಪ್ರೀತಿ, ಸಾಕಷ್ಟು ಜನರಿಗೆ ಕಡಿಮೆಯಾಗಿಲ್ಲ. ಸೋಷಿಯಲ್ ಮೀಡಿಯಾದಿಂದಲೂ ದೂರವಾಗಿದ್ದ ಮಾಜಿ ಸಂಸದೆ ಇತ್ತೀಚೆಗೆ ಮತ್ತೆ ಆಕ್ಟೀವ್ ಆಗಿದ್ದರು.

ಇಂದು ದಿಢೀರ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಹಲಸೂರು ಗೇಟ್ ಹತ್ತಿರ ಇರುವ ಕೇಂದ್ರ ವಿಭಾಗದ ಸಿಇಎನ್ ಠಾಣೆಗ ಬಂದು ವ್ಯಕ್ತಿಯೊಬ್ಬನ ವಿರುದ್ಧ ದೂರು ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅನುಚಿತ ಪದ ಬಳಿಸಿ ನಿಂದಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!