ಸ್ಯಾಂಡಲ್ ವುಡ್ ಕ್ವೀನ್ ರೀ ಎಂಟ್ರಿ

224

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮಂಗಳವಾರ ಸಿಹಿ ಸುದ್ದಿ ಕೊಡುವುದಾಗಿ ಹೇಳಿದ್ದರು. ಅದರಂತೆ ಇಂದು ಅದನ್ನು ಅನೌನ್ಸ್ ಮಾಡಿದ್ದು, ಕೆಲವರು ಊಹೆ ಮಾಡಿದಂತೆ ಚಿತ್ರರಂಗಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ. ನಟಿ, ಮಾಜಿ ಸಂಸದೆಯ ಆಗಮನ ಬೇರೆ ರೀತಿಯಿದೆ.

ಯೆಸ್, ನಟಿ ರಮ್ಯಾ ಕಂಬ್ಯಾಕ್ ಮಾಡಿದ್ದಾರೆ. ಆದರೆ, ನಟಿಯಾಗಿ ಅಲ್ಲ, ನಿರ್ಮಾಪಕಿಯಾಗಿ. ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ ನಿರ್ಮಾಪಕಿ ಪಟ್ಟಕ್ಕೆ ಏರುತ್ತಿದ್ದಾರೆ. ಈ ಸಂಸ್ಥೆ ಎರಡು ಚಿತ್ರಗಳನ್ನು ನಿರ್ಮಾಣ ಮಾಡಲು ಸಜ್ಜಾಗಿದೆ. ಏನಿದು ಆಪಲ್ ಬಾಕ್ಸ್ ಅನ್ನೋದಕ್ಕೆ ಅವರೊಂದಿಷ್ಟು ವಿವರಣೆ ಕೊಟ್ಟಿದ್ದಾರೆ. ನಟಿ ರಮ್ಯಾ ಚಿತ್ರರಂಗಕ್ಕೆ ರೀ ಎಂಟ್ರಿ ಕೊಟ್ಟಿರುವುದು ಅವರ ಅಭಿಮಾನಿಗಳಿಗೆ ಖುಷಿಯಾಗಿದೆ. ಮತ್ತೆ ತೆರೆಯ ಮೇಲೆ ನೋಡುವ ದಿನಗಳು ದೂರವಿಲ್ಲ ಎಂದುಕೊಳ್ಳುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!