ನಟಿ ರಮ್ಯಾ ಸಾವಿನ ಸುದ್ದಿ ವದಂತಿ

323

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅನ್ನೋ ವದಂತಿ ಹರಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲ ಆನ್ಲೈನ್ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಹರಿದಾಡಿದೆ. ರಮ್ಯಾ ಆಪ್ತರು, ಇದು ಸುಳ್ಳು ಸುದ್ದಿ. ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಮಿಳಿನ ಕೆಲ ವೆಬ್ ಸೈಟ್ ಗಳು ನಟಿ ರಮ್ಯಾ ಸಾವಿನ ಸುದ್ದಿ ಪ್ರಕಟಿಸಿವೆ. ಇದನ್ನೇ ಇತರೆ ಮಾಧ್ಯಮಗಳು ನಂಬಿ ಸುದ್ದಿ ಪ್ರಟಿಸಿವೆ. ರಮ್ಯಾ ಯುರೋಪ್ ಪ್ರವಾಸದಲ್ಲಿದ್ದಾರೆ. ಅವರು ಆರೋಗ್ಯವಾಗಿದ್ದಾರೆ. ಶುಕ್ರವಾರ ಸ್ವದೇಶಕ್ಕೆ ಮರಳಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!