ಅನಕ್ಷರಸ್ಥರು ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರೆ ಎಂದ ಸೂಲಿಬೆಲೆ

90

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಆಗುವ ವ್ಯಕ್ತಿಗಳಲ್ಲಿ ಬಲಪಂಥೀಯ ವಿಚಾರಧಾರೆಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ ಸಹ ಒಬ್ಬರು. ಮೇ 10ರ ಮತದಾನದ ಬಳಿಕ ಬಂದ ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಗೆ ಬಹುಮತ ಬಂದಿದೆ. ಇದಕ್ಕೆ ಟ್ವೀಟ್ ಮಾಡಿರುವ ಸೂಲಿಬೆಲೆ ಅನಕ್ಷರಸ್ಥರು ಹೆಚ್ಚಾಗಿ ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರೆ ಎಂದಿದ್ದಾರೆ.

ಸೂಲಿಬೆಲೆ ಟ್ವೀಟ್ ಗೆ ಅನೇಕರು ತಿರುಗೇಟು ನೀಡಿದ್ದು, ನೀವು ಹೇಳೋ ಪ್ರಕಾರ ಮೋದಿ ಕೂಡಾ ಕಾಂಗ್ರೆಸ್ ಗೆ ವೋಟ್ ಹಾಕಿದ್ದಾರಾ ಅಂತಾನಾ ಎಂದು ಕಾಲೆಳೆದಿದ್ದಾರೆ. ಮೋದಿ ವಿದ್ಯಾವಂತರಾ ಅಥವ ಅವಿದ್ಯಾವಂತರಾ ಎಂದು ಪ್ರಶ್ನಿಸಿದ್ದಾರೆ. ಹೀಗೆ ಸಾಕಷ್ಟು ಜನರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಅವಿದ್ಯಾವಂತರ ಸ್ವತಂತ್ರ ಪೂರ್ವದಿಂದಲೂ ದೇಶಕ್ಕಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ. ವಿದ್ಯಾವಂತರು ದೇಶ ಮಾರಿ ಹೋಗುತ್ತಿದ್ದಾರೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!