ಸರ್ಕಾರದ ಆದೇಶಕ್ಕೆ ಸಿಡಿದೆದ್ದ ಸಿನಿ ಸ್ಟಾರ್ಸ್

245

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕೆಲ ದಿನಗಳ ಹಿಂದೆ ಸಿನಿಮಾ ಥಿಯೇಟರ್ ಗಳಲ್ಲಿ ಪೂರ್ಣ ಪ್ರಮಾಣದ ಆಸನಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದ ಸರ್ಕಾರ ಇದೀಗ ಮತ್ತೆ ಶೇಕಡ 50ಕ್ಕೆ ಇಳಿಸಿದೆ. ಇದ್ರಿಂದಾಗಿ ಸಂತಸದಲ್ಲಿದ್ದ ಸಿನಿಮಾ ಮಂದಿ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸರ್ಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ರಾಜಕಾರಣಿಗಳ ಸಮಾವೇಶಕ್ಕೆ ಸಾವಿರಾರು ಜನ, ಚುನಾವಣೆ ಪ್ರಚಾರಕ್ಕೆ ಸಾವಿರಾರು ಜನ, ಮದುವೆ ಕಾರ್ಯಕ್ರಮಗಳಲ್ಲಿ, ಮಾರ್ಕೆಟ್ ಗಳಲ್ಲಿ, ಬಸ್ ಗಳಲ್ಲಿ ಜನರು ಗಿಜಿಗಿಜಿ ಎನ್ನುತ್ತಿದ್ದಾರೆ. ಆದ್ರೆ, ಸಿನಿಮಾ ಮಂದಿರಗಳಲ್ಲಿ ಮಾತ್ರ ಶೇಕಡ 50ರಷ್ಟು ಅಂದ್ರೆ ಯಾಕೆ ಎಂದು ವಾಗ್ದಾಳಿ ನಡೆಸ್ತಿದ್ದಾರೆ.

ದುನಿಯಾ ವಿಜಯ ಸೇರಿದಂತೆ ಸಾಕಷ್ಟು ಸ್ಟಾರ್ ನಟರು, ನಟಿಯರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಸಿನಿ ಪ್ರೇಮಿಗಳು ಸಹ ಟ್ವೀಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!