ನಾಳೆ ಫಲಿತಾಂಶ: ಅಭ್ಯರ್ಥಿಗಳಲ್ಲಿ ಟೆನ್ಷನ್ ಜಾಸ್ತಿ

216

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ನಾಳೆ ಹೊರ ಬೀಳಲಿದೆ. ಮುಂಜಾನೆ 7.30ರಿಂದ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ 224 ಕ್ಷೇತ್ರಗಳ ಅಭ್ಯರ್ಥಿಗಳು, ಬೆಂಬಲಿಗರು, ಕಾರ್ಯಕರ್ತರಲ್ಲಿ ಟೆನ್ಷನ್ ಜಾಸ್ತಿ ಆಗಿದೆ.

ಈಗಾಗ್ಲೇ ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬಂದಿದೆ. ಆದರೂ ಇದನ್ನೇ ಪೂರ್ತಿ ನಂಬಲು ಆಗುವುದಿಲ್ಲ. ಅತ್ತ ಬಿಜೆಪಿ ತಮಗೆ ಬಹುಮತ ಬರುವುದು ಖಂಡಿತ. ಬರದೆ ಹೋದರೂ ಏನ್ ಮಾಡಬೇಕು ಅನ್ನೋ ಲೆಕ್ಕಾಚಾರ ನಡೆಸಿದೆ. ಇನ್ನು ಪ್ರಾದೇಶಿಕ ಪಕ್ಷ ಜೆಡಿಎಸ್ ನಾಯಕ ಕುಮಾರಸ್ವಾಮಿ, ಆರೋಗ್ಯ ಸಮೀಕ್ಷೆಯಿಂದ ಸಿಂಗಾಪುರಕ್ಕೆ ಹಾರಿದ್ದಾರೆ.

ಆಡಳಿತ ವಿರೋಧಿ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿದ್ದರೆ ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತ ಬೀಳುವುದು ಪಕ್ಕಾ. ಒಂದು ವೇಳೆ ಮತದಾರರ ಯಾರಿಗೂ ಸ್ಪಷ್ಟ ಬಹುಮತ ಕೊಡದೆ ಇದ್ದದರೆ ಆಪರೇಷನ್ ಕಮಲ, ಆಪರೇಷನ್ ಹಸ್ತ ನಡೆಯುವುದು ಮಾತ್ರ ಸತ್ಯ. ಬಹುಮತ ಬರದೆ ಹೋದರೆ ರಾಜಕೀಯ ನಿವೃತ್ತಿ ಎಂದಿರುವ ಕುಮಾರಸ್ವಾಮಿ ಎಲ್ಲದರಿಂದ ಹಿಂದೆ ಸರಿಯುತ್ತಾರಾ ಹಿಂದೆ ಮಾತು ತಪ್ಪಿದಂತೆ ಮತ್ತೆ ಮತ್ತೊಂದು ಪಕ್ಷದ ಜೊತೆಗೆ ಕೈ ಜೋಡಿಸುತ್ತಾರಾ ಅನ್ನೋದು ಕಾದು ನೋಡಬೇಕಿದೆ.




Leave a Reply

Your email address will not be published. Required fields are marked *

error: Content is protected !!