ಐಸಿಸಿ ರ್ಯಾಂಕ್: 3ನೇ ಸ್ಥಾನಕ್ಕೆ ಕುಸಿದ ಭಾರತ

108

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ಏಕದಿನ ಮಾದರಿಯ ವಾರ್ಷಿಕ ರ್ಯಾಂಕ್ ಗುರುವಾರ ಪ್ರಕಟಿಸಿದೆ. ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ನಂಬರ್ 1, ಪಾಕಿಸ್ತಾನ ನಂಬರ್ 2 ಸ್ಥಾನದಲ್ಲಿವೆ. ನ್ಯೂಜಿಲೆಂಡ್ ಎದುರು ಕೊನೆಯ ಪಂದ್ಯದಲ್ಲಿ ಸೋತ ಪಾಕ್ 2ನೇ ಸ್ಥಾನಕ್ಕೆ ಬಂದಿದೆ. ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೆ ಹಾರಿದೆ.

5 ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸೀಸ್ 118 ಪಾಯಿಂಟ್ಸ್, ಪಾಕ್ 116 ಪಾಯಿಂಟ್ಸ್, ಭಾರತ 115 ಪಾಯಿಂಟ್ಸ್ ಹೊಂದಿವೆ. 113 ಅಂಕಗಳೊಂದಿಗೆ ಭಾರತ ಹಾಗೂ ಆಸ್ಟ್ರೇಲಿಯಾ ಜಂಟಿಯಾಗಿ ಮೊದಲ ಸ್ಥಾನದಲ್ಲಿದ್ದವು. ನ್ಯೂಜಿಲೆಂಡ್ ಎದುರು 4-0ದಿಂದ ಸರಣಿ ಗೆದ್ದ ಪಾಕ್ ತನ್ನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ನಂಬರ್ 1 ಸ್ಥಾನ ಪಡೆದಿದೆ.

ನ್ಯೂಜಿಲೆಂಡ್ 4ನೇ ಸ್ಥಾನ, ಇಂಗ್ಲೆಂಡ್ 5, ಸೌಥ್ ಆಫ್ರಿಕಾ 6, ಬಾಂಗ್ಲಾದೇಶ 7, ಅಫ್ಘಾನಿಸ್ತಾನ 8, ಶ್ರೀಲಂಕಾ 9 ಹಾಗೂ ಒಂದು ಕಾಲದಲ್ಲಿ ಕ್ರಿಕೆಟ್ ಲೋಕ ಆಳಿದ ವೆಸ್ಟ್ ಇಂಡೀಸ್ 10ನೇ ಸ್ಥಾನದಲ್ಲಿದೆ.

ಇನ್ನು ಬ್ಯಾಟಿಂಗ್ ನಲ್ಲಿ ಟಿ-20ನಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ನಂಬರ್ 1, ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹಾಗೂ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲಬುಶೇನ್ ನಂಬರ್ 1 ಸ್ಥಾನದಲ್ಲಿದ್ದಾರೆ.


TAG


Leave a Reply

Your email address will not be published. Required fields are marked *

error: Content is protected !!