ವಿಪಕ್ಷ ನಾಯಕತ್ವದ ಆಯ್ಕೆಗೆ ‘ಸಂ’ಕಷ್ಟ!

323

ಬೆಂಗಳೂರು: ರಾಜ್ಯ ವಿಧಾನಸಭೆಯ ವಿಪಕ್ಷ ಸ್ಥಾನದ ನಾಯಕತ್ವ ಯಾರಿಗೆ ನೀಡಬೇಕು ಅನ್ನೋದರ ಕುರಿತು, ಕಾಂಗ್ರೆಸ್ ಅಭಿಪ್ರಾಯ ಸಂಗ್ರಹಿಸಿದೆ. ಇದರ ಬೆನ್ನೆಲ್ಲೇ ಒಂದಿಷ್ಟು ಸಂಕಷ್ಟ ಎದುರಾಗಿದೆ. ಕೈನ ಹಿರಿಯ ನಾಯಕರ ನಡುವೆ ಮುಸುಕಿನ ಗುದ್ದಾಟ ಇದಕ್ಕೆಲ್ಲ ಕಾರಣ.

ಸಿದ್ದರಾಮಯ್ಯನವರನ್ನ ವಿಪಕ್ಷ ಸ್ಥಾನದ ನಾಯಕತ್ವ ಬೇಡ ಎಂದು ಕೆಲವರ ವಾದ. ಈ ಬಾರಿಯ ಚುನಾವಣೆ ಅವರ ನೇತೃತ್ವದಲ್ಲಿ ನಡೆಸಿದ್ರೂ ಸೋಲಾಗಿದೆ. ಹೀಗಾಗಿ ಅವರಿಗೆ ಬೇಡ ಅಂತಾ ಮೂಲ ಕಾಂಗ್ರೆಸ್ ನಾಯಕರು ಪಟ್ಟು ಹಿಡಿದ್ದಾರೆ. ಮಾಜಿ ಸಿಎಂ ಬೆಂಬಲಿಗರು ಸಿದ್ದರಾಮಯ್ಯನವರು ವಿಪಕ್ಷ ಸ್ಥಾನದ ನಾಯಕನಾಗ್ಲಿ ಅಂತಿದ್ದಾರೆ.

ಇನ್ನು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ ಹಾಗೂ ಮಾಜಿ ಸಚಿವ ಹೆಚ್.ಕೆ ಪಾಟೀಲರ ನಡುವೆ ಒಬ್ಬರು ಆಗ್ಲಿ ಅನ್ನೋದು ಕೆಲವರ ವಾದ. ಯಾಕಂದ್ರೆ, ಮೈತ್ರಿ ಸರ್ಕಾರ ಬೀಳುವಲ್ಲಿ ಸಿದ್ದರಾಮಯ್ಯನವರ ಪಾತ್ರವಿದೆ ಅಂತಾ ಹೇಳಲಾಗ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಉಳಿಯಬೇಕಂದ್ರೆ ಪರಮೇಶ್ವರ ಅಥವ ಹೆಚ್.ಕೆ ಪಾಟೀಲಗೆ ಈ ಸ್ಥಾನ ನೀಡಿ ಅಂತಿದ್ದಾರೆ.

22 ಶಾಸಕರು, 28 ಮಾಜಿ ಸಂಸದರು, 6 ವಿಧಾನಪರಿಷತ್ ಸದಸ್ಯರು ಸೇರಿದಂತೆ ಪ್ರಮುಖ 63 ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಇದರ ಕಂಪ್ಲೀಟ್ ವರದಿಯನ್ನ ಹೈಕಮಾಂಡ್ ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಧುಸೂಧನ ಮಿಸ್ತ್ರಿ ನೀಡಲಿದ್ದಾರೆ. ಇದರ ಫಲಿತಾಂಶ ಏನು ಅನ್ನೋ ಟೆನ್ಷನ್ ಕೈ ನಾಯಕರಲ್ಲಿದೆ.




Leave a Reply

Your email address will not be published. Required fields are marked *

error: Content is protected !!