ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ

852

ಇಂದು ನಾಡಿನ ಮೂಲೆ ಮೂಲೆಯಲ್ಲಿ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ವಿಜಯದಶಮಿಗೂ ಒಂದು ದಿನ ಮೂದಲು ಆಯುಧ ಪೂಜೆ ಮಾಡಲಾಗುತ್ತೆ. ನಾಳೆ ನವರಾತ್ರಿಯ ರಂಗು ಇನ್ನಷ್ಟು ಜೋರಾಗಿರಲಿದೆ. ಇದಕ್ಕೂ ಮೊದ್ಲು ಇಂದು ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತೆ.

ಮನೆ, ಸರ್ಕಾರಿ ಕಚೇರಿ, ಖಾಸಗಿ ಸಂಸ್ಥೆಗಳು ಸೇರಿದಂತೆ ಎಲ್ಲೆಡೆ ಇಂದು ಬನ್ನಿಯೊಂದಿಗೆ ಸಂಸ್ಥೆಯಲ್ಲಿನ ವಸ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಕೆಲಸ ಕಾರ್ಯ ಸುಗಮವಾಗಿ ನಡೆಯಲಿ ಎಂದು ಬೇಡಿಕೊಳ್ಳಲಾಗುತ್ತೆ. ಇನ್ನು ಆಯುಧ ಪೂಜೆಯ ಹಿಂದೆ ಎರಡು ಪೌರಾಣಿಕ ಕಾರಣಗಳಿವೆ.

ದುರ್ಗಾ ಮಾತೆ ಚಾಮುಂಡೇಶ್ವರಿ ರೂಪವೆತ್ತಿ ಮಹಿಷಾಸುರನ ಸಂಹಾರ ಮಾಡಿದ್ಮೇಲೆ ಆಕೆ ಬಿಸಾಡಿದ ಆಯುಧಗಳನ್ನ ಮತ್ತೆ ಬಳಸಲಿಲ್ಲ. ಅವುಗಳನ್ನ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯ ಬೆಳೆಯಿತು. ಅದು ಮುಂದೆ ಆಯುಧ ಪೂಜೆಯಾಗಿ ಎಲ್ಲೆಡೆ ಆಚರಿಸಲಾಗುತ್ತೆ ಅನ್ನೋದು.

ಇನ್ನೊಂದು, ದ್ವಾಪರ ಯುಗದಲ್ಲಿ ಪಾಂಡವರು 13 ವರ್ಷಗಳ ವನವಾಸ ಮಾಡ್ತಾರೆ. ಈ ವೇಳೆ ಬನ್ನಿ ಗಿಡದಲ್ಲಿ ಶಸ್ತ್ರಾಸ್ತ್ರಗಳನ್ನ ಬಚ್ಚಿಟ್ಟಿರ್ತಾರೆ. ವನವಾಸ ಮುಗಿದ್ಮೇಲೆ ಆ ಆಯುಧಗಳಿಂದ ಶತ್ರುಗಳ ವಿರುದ್ಧ ಹೋರಾಡಿ ವಿಜಯ ಸಾಧಿಸಿದ್ದಕ್ಕಾಗಿ ವಿಜಯದಶಮಿ ಆಚರಣೆ ಅನ್ನೋ ಪೌರಾಣಿಕ ಪ್ರತೀತಿಯಿದೆ.




Leave a Reply

Your email address will not be published. Required fields are marked *

error: Content is protected !!