ಆಕೆಯ ಕಾರಣಕ್ಕೆ ಸಹಿ ಮಾಡಿದ ಚಿತ್ರದಿಂದ ರವೀನಾ ಟಂಡನ್ ಹೊರ ಹಾಕಿದರಂತೆ!

395

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಿನಿಮಾ ಜಗತ್ತು ಅನ್ನೋದು ಕಲರ್ ಫುಲ್. ಅಲ್ಲಿ ನಟನೆ, ಸೌಂದರ್ಯದ ಜೊತೆಗೆ ಒಂದಿಷ್ಟು ಗಿಮಿಕ್ ಗೊತ್ತಿರಬೇಕು. ಇದರ ಜೊತೆಗೆ ಧೈರ್ಯ, ತಾಳ್ಮೆ, ಆತ್ಮವಿಶ್ವಾಸ ಇದ್ರೆ ಒಂದಿಷ್ಟು ಕಾಲ ನಿಲ್ಲಬಹುದು. ಇಲ್ದೇ, ಹೋದ್ರೆ ತುಳಿದು ಬಿಡ್ತಾರೆ. ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಗೂ ಈ ಅನುಭವ ಆಗಿದೆ.

ಸಹಿ ಮಾಡಿ, ಅಡ್ವಾನ್ ಪಡೆದ ಚಿತ್ರವೊಂದರಿಂದ ರಾತ್ರೋ ರಾತ್ರಿ ಕೈಬಿಡಲಾಯ್ತು ಎಂದು ಹೇಳಿದ್ದಾರೆ. ಕಾರಣ, ಆ ಚಿತ್ರದ ಹೀರೋನ ಗರ್ಲ್ ಫ್ರೆಂಡ್ ಗೆ ನನ್ನ ಕಂಡ್ರೆ ಇಷ್ಟವಿರ್ಲಿಲ್ಲ. ಹೀಗಾಗಿ ಫೋನ್ ಮಾಡಿ ನಿಮ್ಮನ್ನ ಚಿತ್ರದಿಂದ ಕೈ ಬಿಡಲಾಗಿದೆ. ನಿಮ್ಗೆ ಕೊಟ್ಟಿದ್ದ ಅಡ್ವಾನ್ಸ್ ವಾಪಸ್ ಮಾಡಿ ಎಂದು ಹೇಳಿದ್ರು ಎಂದಿದ್ದಾರೆ.

ಪ್ರತಿಯೊಂದು ಚಿತ್ರರಂಗದಲ್ಲಿ ರಾಜಕೀಯವಿದೆ. ಇಲ್ಲಿ ಕೆಟ್ಟವರು ಇದ್ದಾರೆ. ಒಳ್ಳೆಯವರು ಇದ್ದಾರೆ. ಇದು ಅನೇಕ ಮಹಾನ್ ನಟ, ನಟಿಯರನ್ನೂ ಬಿಟ್ಟಿಲ್ಲ. ಅವರೆ ನನ್ಗೆ ಸ್ಪೂರ್ತಿ. ಗ್ಲ್ಯಾಮರ್ ಜಗತ್ತಿನಲ್ಲಿ ಸಣ್ಣ ವಿಚಾರ ಸಹ ದೊಡ್ಡದಾಗುತ್ತೆ. ನಟ ಸುಶಾಂತ ಸಿಂಗ್ ರಜಪೂತ್, ಸುಂದರ, ಪ್ರತಿಭಾವಂತ ನಟ. ಎಲ್ಲರಲ್ಲಿ ಇರುವಂತೆ ಯಶಸ್ಸಿನ ಭಯ ಅವನಲ್ಲಿಯೂ ಇತ್ತು. ಆದ್ರೆ, ಅವನ ನಿರ್ಧಾರ ಊಹಿಸಿಕೊಳ್ಳಲು ಕಷ್ಟವಾಗುತ್ತೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!