ಕ್ವಾರಂಟೈನ್ ವ್ಯಕ್ತಿ ಓಡಾಟ: ಸ್ಥಳೀಯರಲ್ಲಿ ಆತಂಕ

347

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಕೈಗೆ ಕ್ವಾರಂಟೈನ್ ಸೀಲ್ ಹಾಕಿಕೊಂಡಿರುವ ವ್ಯಕ್ತಿಯ ಓಡಾಟದಿಂದ ಸ್ಥಳೀಯರು ಭಯಭೀತರಾಗಿರುವ ಘಟನೆ ವಿಜಯಪುರ ನಗರದ ಬಡಿಕಮಾನ ರಸ್ತೆಯಲ್ಲಿ ನಡೆದಿದೆ. ಕೈಗೆ ಸೀಲ್ ಹಾಕಿದ್ರೂ ಕ್ವಾರಂಟೈನ್ ನಿಂದ ಈತ ತಪ್ಪಿಸಿಕೊಂಡು ಬಂದಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಈತ ಹೋಂ ಕ್ವಾರಂಟೈನ್ ನಲ್ಲಿದ್ದನೋ ಅಥವಾ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದನೋ ಎಂಬುದು ಯಾರಿಗೂ ಗೊತ್ತಾಗಿಲ್ಲ. ಆದ್ರೇ, ಕರೋನಾ ಸೀಲ್ ಹೊಂದಿರುವ ವ್ಯಕ್ತಿ ನಗರದಲ್ಲಿ ಓಡಾಟ ಮಾಡ್ತಿರುವುದ್ರಿಂದ ಜನರಲ್ಲಿ ಆತಂಕ ಮೂಡಿದೆ. ಕೂಡಲೇ ಈತನಿಗೆ ಜಿಲ್ಲಾಡಳಿತದವರು ಕ್ವಾರಂಟೈನ್ ಮಾಡಲು ಸ್ಥಳೀಯರ ಒತ್ತಾಯಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!