ಚಂದನವನಕ್ಕೆ ನೈಟ್ ಕರ್ಫ್ಯೂ ಬಿಸಿ.. ನೈಟ್ ಶೋ ಬಂದ್!

197

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಓಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಇಂದಿನಿಂದ ಜನವರಿ 7ರ ಜನಕ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ವಾಹನ ಸಂಚಾರಕ್ಕೆ ಅವಕಾಶ ನೀಡಿದರೂ ಒಂದಿಷ್ಟು ನಿರ್ಬಂಧ ವಿಧಿಸಲಾಗಿದೆ. ಹೊಸ ವರ್ಷದ ಸಂಭ್ರಮಕ್ಕೂ ಕೆಲವೊಂದಿಷ್ಟು ನಿಯಮಗಳನ್ನು ಸೂಚಿಸಲಾಗಿದೆ. ಇದರ ನಡುವೆ ಕನ್ನಡ ಚಿತ್ರರಂಗಕ್ಕೆ ನೈಟ್ ಕರ್ಫ್ಯೂ ಬಿಸಿ ತಟ್ಟಿದೆ.

ಡಿಸೆಂಬರ್ 31ರಂದು ಕರ್ನಾಟಕ ಬಂದ್ ನಿಂದ ಮೂರು ಚಿತ್ರಗಳಿಗೆ ಹೊಡೆತ ಬೀಳುತ್ತೆ ಎನ್ನುತ್ತಿರುವ ಹೊತ್ತಿನಲ್ಲೇ 10 ದಿನಗಳ ನೈಟ್ ಶೋ ಬಂದ್ ಎಂದು ತಿಳಿದು ಬಂದಿದೆ. ಇದರಿಂದಾಗಿ ಚಿತ್ರರಂಗದ ಮೇಲೆ ಮತ್ತಷ್ಟು ದೊಡ್ಡ ಮಟ್ಟದ ಪರಿಣಾಮ ಬೀರಲಿದೆ.

ಮೊದಲೇ ಕೋವಿಡ್ 19 ಹಾವಳಿ, ಲಾಕ್ ಡೌನ್ ನಿಂದಾಗಿ ಎರಡು ವರ್ಷಗಳಿಂದ ಚಿತ್ರರಂಗ ಸ್ತಬ್ಧವಾಗಿತ್ತು. ಇದೀಗ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಈಗ ಮತ್ತೆ 10 ದಿನ ನೈಟ್ ಶೋ ಬಂದ್ ಆಗುತ್ತಿದ್ದು, ಸ್ಯಾಂಡಲ್ ವುಡ್ ಮಂದಿಗೆ ಮತ್ತೆ ಟೆನ್ಷನ್ ಶುರುವಾಗಿದೆ.




Leave a Reply

Your email address will not be published. Required fields are marked *

error: Content is protected !!