ಐಸಿಸಿ ವರ್ಷದ ಟೆಸ್ಟ್ ಆಟಗಾರರ ನಾಮನಿರ್ದೇಶನ: ಟೀಂ ಇಂಡಿಯಾದಿಂದ ಯಾರು?

221

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ವರ್ಷದ ಟೆಸ್ಟ್ ಆಟಗಾರರ ನಾಮನಿರ್ದೇಶಿತ ಪಟ್ಟಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಇದರಲ್ಲಿ ಟೀಂ ಇಂಡಿಯಾದ ಓರ್ವ ಆಟಗಾರ ಸ್ಥಾನ ಪಡೆದಿದ್ದಾರೆ. ಅವರೆ ಸ್ಪೀನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್.

ಇಂಗ್ಲೆಂಡ್ ಕ್ಯಾಪ್ಟನ್ ಜೋ ರೂಟ್, ನ್ಯೂಜಿಲೆಂಡ್ ತಂಡದ ಜೇಮಿಸನ್, ಶ್ರೀಲಂಕಾದ ದಿಮುತ್ ಕರುಣಾರತ್ನೆ ನಾಮನಿರ್ದೇಶನಗೊಂಡಿದ್ದಾರೆ. ಜೋ ರೂಟ್, ದಿಮುತ್ ಬ್ಯಾಟಿಂಗ್ ಮೂಲಕ ಅಬ್ಬರಿಸಿದ್ದಾರೆ. ಅಶ್ವಿನ್ ಹಾಗೂ ಜೇಮಿಸನ್ ಬೌಲಿಂಗ್ ನಿಂದ ಮಿಂಚಿದ್ದಾರೆ.

ಈ ವರ್ಷದ ಇವರ ಉತ್ತಮ ಆಟದಿಂದಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಅಂತಿಮವಾಗಿ ಓರ್ವ ಆಟಗಾರನಿಗೆ ಬೆಸ್ಟ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಟೀಂ ಇಂಡಿಯಾದಿಂದ ಸ್ಪೀನ್ ಬೌಲರ್ ರವಿಚಂದ್ರನ್ ಅಶ್ವಿನ್ ಮಾತ್ರ ನಾಮನಿರ್ದೇಶನಗೊಂಡಿದ್ದು, ಪ್ರಶಸ್ತಿಗೆ ಆಯ್ಕೆ ಆಗುತ್ತಾರಾ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!