‘ಸಿನಿಮಾಗಾಗಿ ಯಾವ ಹೀರೋನೊಂದಿಗೂ ನಾನು ಮಲಗಿಲ್ಲ’

362

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ಸಿನಿ ದುನಿಯಾದಲ್ಲಿ ಇದೀಗ ವಿವಾದಗಳ ಅಲೆ ಎದಿದೆ. ಒಂದರ ಮೇಲೊಂದು ಕಿಡಿ ಹಾರುತ್ತಿದೆ. ಇದೀಗ 90ರ ದಶಕದ ಸ್ಟಾರ್ ನಟಿ ರವೀನಾ ಟಂಡನ್, ಹೊಸ ಬಾಂಬ್ ಎಸೆದಿದ್ದಾರೆ. ಅದು ಚಿತ್ರರಂಗದಲ್ಲಿನ ಪುರುಷರ ದಬ್ಬಾಳಿಕೆ ಬಗ್ಗೆ.

ಮನರಂಜನಾ ಪೋರ್ಟಲ್ ವೊಂದಕ್ಕೆ ಸಂದರ್ಶನ ನೀಡಿರುವ ರವೀನಾ ಟಂಡನ್, ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಅದರಲ್ಲಿ ಏಕಸ್ವಾಮ್ಯದ ಬಗ್ಗೆಯೂ ಮಾತ್ನಾಡಿದ್ದಾರೆ. ಇದರ ಜೊತೆಗೆ ಅವರು ಹೇಳಿದ ಅತ್ಯಂತ ಗಂಭೀರ ವಿಷಯ ಅಂದ್ರೆ, ಅವಕಾಶಕ್ಕಾಗಿ ಯಾರೊಂದಿಗೆ ರಾಜಿ ಮಾಡಿಕೊಂಡಿಲ್ಲ. ಯಾವ ಹೀರೋನೊಂದಿಗೂ ಮಲಗಿಲ್ಲ ಎಂದು ಹೇಳಿರುವುದು.

ಸಿನಿ ವರ್ಲ್ಡ್ ಕಾಸ್ಟ್ ಕೌಚಿಂಗ್ ಅನ್ನೋದು ಸದಾ ಚರ್ಚೆಯಲ್ಲಿರುತ್ತೆ. ಅವಕಾಶಕ್ಕಾಗಿ ನಟಿಯರನ್ನ ನಿರ್ದೇಶಕರು, ನಿರ್ಮಾಪಕರು, ಹೀರೋಗಳು ಬಳಸಿಕೊಳ್ಳುವುದು. ಈ ಬಗ್ಗೆ ಅನೇಕ ಸ್ಟಾರ್ ನಟಿಯರು ಬಾಯಿ ಬಿಟ್ಟಿದ್ದಾರೆ. ತಮ್ಗಾದ ಕಹಿ ಅನುಭವಗಳನ್ನ ಹೇಳಿಕೊಂಡಿದ್ದಾರೆ. ಅದೆ ರೀತಿ ರವೀನಾ ಟಂಡನ್ ಹೇಳಿದ್ದು, ರಾಜಿ ಮಾಡಿಕೊಳ್ಳದ ಕಾರಣಕ್ಕೆ ಹಲವು ಚಿತ್ರಗಳಿಂದ ಹೊರಗೆ ಉಳಿದಿದ್ದೇನೆ ಎಂದಿದ್ದಾರೆ.

ದಿವಾಲೆ, ಅಂದಾಜ್ ಅಪ್ನಾ, ದುಲ್ಹೆ ರಾಜ್ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ನಟಿ, ಇದೀಗ ಕೆಜಿಎಫ್ ಚಾಪ್ಟರ್ 2 ಚಿತ್ರದಲ್ಲಿ ಪ್ರಧಾನಿಯಾಗಿ ಕಾಣಿಸಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!