ಕಾರ್ಮಿಕನಿಗೆ ಸಿಕ್ತು 35 ಲಕ್ಷ ಮೌಲ್ಯದ 3 ವಜ್ರಗಳು

291

ಪ್ರಜಾಸ್ತ್ರ ಸುದ್ದಿ

ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿರುವ ಗಣಿಯೊಂದರಲ್ಲಿ ಕೆಲಸ ಮಾಡ್ತಿರುವ ಕಾರ್ಮಿಕನೊಬ್ಬನಿಗೆ ಸುಮಾರು 35 ಲಕ್ಷ ಬೆಲೆ ಬಾಳುವ 3 ವಜ್ರಗಳು ದೊರೆತಿವೆ. ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ, ಗಣಿ ಅಗೆಯುವಾಗ ವಜ್ರಗಳು ಸಿಕ್ಕಿವೆ.

ಸಬಲ್ ಅನ್ನೋ ಕಾರ್ಮಿಕನಿಗೆ 7.5 ಕ್ಯಾರೆಟ್ ನ 3 ವಜ್ರಗಳು ಸಿಕ್ಕಿವೆ. ಇವುಗಳನ್ನ ಜಿಲ್ಲಾ ಡೈಮೆಂಡ್ ಕಚೇರಿಯಲ್ಲಿಟ್ಟಿದ್ದು, ಸರ್ಕಾರಿ ನಿಯಮಗಳ ಪ್ರಕಾರ ಹರಾಜು ಹಾಕಲಾಗುತ್ತೆ. ಬಳಿಕ ಶೇಕಡ 12ರಷ್ಟು ತೆರಿಗೆ ಕಡಿತ ಮಾಡಿಕೊಂಡು ಶೇಕಡ 88ರಷ್ಟು ಹಣ ಸಬಲ್ ಗೆ ಸಿಗಲಿದೆ. ಈ ಮೂಲಕ ಕಾರ್ಮಿಕನ ಅದೃಷ್ಟದ ಬಾಗಿಲು ತೆರೆದಿದೆ.




Leave a Reply

Your email address will not be published. Required fields are marked *

error: Content is protected !!