ರಾಜ್ಯದಲ್ಲಿ ಒಂದೂವರೆ ಲಕ್ಷ ದಾಟಿದ ಸೋಂಕಿತರು

326

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6,805 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ 1,58,254 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 5,602 ಜನರು ಇಂದು ಡಿಸ್ಚಾರ್ಜ್ ಆಗಿದ್ದು 80,281 ಜನರು ಗುಣಮುಖರಾಗಿದ್ದಾರೆ.

ಇನ್ನು 75,068 ಪ್ರಕರಣಗಳು ಸಕ್ರಿಯವಾಗಿವೆ. ಅಲ್ದೇ, 98 ಜನರು ಸಾವನ್ನಪ್ಪಿದ್ದು, 2,897 ಜನರು ಇದುವರೆಗೂ ಸಾವನ್ನಪ್ಪಿದ್ದಾರೆ. 671 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲಾವಾರು ಸೋಂಕಿತರ ಅಂಕಿಸಂಖ್ಯೆ ಹೀಗಿದೆ..

ಬೆಂ.ನ 2544, ಬಳ್ಳಾರಿ 431, ಮೈಸೂರು 361, ಶಿವಮೊಗ್ಗ 292, ಬೆಳಗಾವಿ 229, ಉಡುಪಿ 217, ಧಾರವಾಡ 212, ದಾವಣಗೆರೆ 197, ಕಲಬುರಗಿ 196, ರಾಯಚೂರು 181, ದ.ಕ 173, ಬಾಗಲಕೋಟೆ 168, ತುಮಕೂರು 160, ಹಾಸನ 158, ಮಂಡ್ಯ 134, ಕೊಪ್ಪಳ 132, ಗದಗ 124, ಚಿಕ್ಕಬಳ್ಳಾಪುರ 117, ಕೋಲಾರ 107, ಬೀದರ 98, ಚಾಮರಾಜನಗರ 95, ಉ.ಕ 77, ಹಾವೇರಿ 64, ಚಿಕ್ಕಮಗಳೂರು 59, ವಿಜಯಪುರ 58, ಚಿತ್ರದುರ್ಗ 58, ಕೊಡಗು 51, ರಾಮನಗರ 41, ಯಾದಗಿರಿ 37, ಬೆಂ.ಗ್ರಾ 34 ಜನರು ಸೋಂಕಿಗೆ ತುತ್ತಾಗಿದ್ದಾರೆ.




Leave a Reply

Your email address will not be published. Required fields are marked *

error: Content is protected !!