ನಟಿ ಸಂಜನಾ ಒಂದಲ್ಲ ಒಂದು ಯಡವಟ್ಟುಗಳನ್ನ ಮಾಡಿಕೊಳ್ಳುತ್ತಲೇ ಇರ್ತಾಳೆ. ಇತ್ತೀಚಿಗೆ ಕಾರ್ ಡ್ರೈವ್ ಮಾಡ್ತಾ ಸೆಲ್ಫಿ ವಿಡಿಯೋ ಮಾಡಿದ್ದಳು. ಈ ಮೂಲಕ ಸಂಚಾರ ನಿಮಯ ಉಲ್ಲಂಘನೆ ಮಾಡಿದ ಕೇಸ್ ಸಂಜನಾ ಮೇಲೆ ಬಿದ್ದಿತ್ತು. ಅದಕ್ಕೆ ಸಂಬಂಧಿಸಿದಂತೆ ನಟಿ ಇದೀಗ ದಂಡ ಕಟ್ಟಿ ಪೊಲೀಸರ ಬಳಿ ಕ್ಷಮೆ ಕೇಳಿದ್ದಾಳೆ.
ಸಂಚಾರಿ ವಿಭಾಗದ ಜಂಟಿ ಆಯುಕ್ತರಾಗಿರುವ ಬಿ.ಆರ್ ರವಿಕಾಂತೇಗೌಡ ಅವರು ಸಂಚಾರ ವಿಭಾಗದ ಡಿಸಿಪಿ ಅವರಿಗೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ನೋಟಿಸ್ ನೀಡಿದ್ರು. ಇದ್ರಂತೆ ನಟಿ ಸಂಜನಾಗೆ ಬನಶಂಕರಿ ಠಾಣೆ ಪೊಲೀಸ್ರು ನೋಟಿಸ್ ನೀಡಿದ್ರು. ಆದ್ರೆ, ನಟಿ ಶೂಟಿಂಗ್ ಸಲುವಾಗಿ ದುಬೈಗೆ ತೆರಳಿದ್ದ ಪರಿಣಾಮ ಟೈಂ ಕೇಳಿದ್ರು.
ಇಂದು ಬೆಂಗಳೂರಿಗೆ ಬಂದ ನಟಿ ಸಂಜನಾ ಜಂಟಿ ಆಯುಕ್ತರ ಕಚೇರಿಗೆ ತೆರಳಿ 2 ಸಾವಿರ ರೂಪಾಯಿ ದಂಡ ಕಟ್ಟಿದ್ದಾರೆ. ಅಲ್ದೇ, ತಮ್ಮಿಂದಾದ ತಪ್ಪಿಗೆ ಕ್ಷಮಾಪಣೆ ಪತ್ರವನ್ನ ಬರೆದು ಕೊಟ್ಟಿದ್ದಾರೆ.