ರಾಗಿಣಿ, ಸಂಜನಾ ಆಯ್ತು.. ಉಳಿದವರ ಹೆಸರು ಹೇಳ್ರಪ್ಪೋ…!

476

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ದ್ವಿವೇದಿ ಬಳಿಕ ಇದೀಗ ಸಂಜನಾ ಗರ್ಲಾನಿಯನ್ನ ಬಂಧಿಸಲಾಗಿದೆ. ಇಂದು ಬೆಳಗ್ಗೆ ಸಿಸಿಬಿ ಅಧಿಕಾರಿಗಳು ಸಂಜನಾ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಡ್ರೆಗ್ಸ್ ಪೆಡ್ಲರ್ ರಾಹುಲ ನೀಡಿದ ಮಾಹಿತಿ ಮೇರೆಗೆ ನಟಿ ಸಂಜನ ಗರ್ಲಾನಿಯನ್ನ ಬಂಧಿಸಲಾಗಿದೆ. ಈ ವೇಳೆ ಸಿಸಿಬಿ ಅಧಿಕಾರಿಗಳ ಜೊತೆಗೆ ಗಲಾಟೆ ಮಾಡಿದ್ದಾರೆ ಎಂದು ಹೇಳಲಾಗ್ತಿದೆ. ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಏನು ಸಾಕ್ಷಿಯಿದೆ ಎಂದು ಕೇಳಿದ್ದಾರೆ ಎಂದು ಹೇಳಲಾಗ್ತಿದೆ.

ಸಂಜನಾ ಬಂಧನವಾಗುತ್ತೆ ಅನ್ನೋದು ಬಹುತೇಕ ಜನರಿಗೆ ಗೊತ್ತಾಗಿತ್ತು. ಅದರಂತೆ ಇದೀಗ ಸಂಜನಾ ಬಂಧನವಾಗಿದೆ. ಆದ್ರೆ, ಈ ಇಬ್ಬರು ನಟಿಯರನ್ನ ಬಿಟ್ಟು ಉಳಿದವರ ಹೆಸರು ಬಯಲಾಗುತ್ತಾ? ಅವರನ್ನ ಬಂಧಿಸಲಾಗುತ್ತಾ? ಹಾಗಾದ್ರೆ ಅವರು ಯಾರು ಅನ್ನೋದು ಹೇಳಲಾಗುತ್ತಾ ಅನ್ನೋ ಪ್ರಶ್ನೆ ಮೂಡಿದೆ.




Leave a Reply

Your email address will not be published. Required fields are marked *

error: Content is protected !!