ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕೆಲವು ಡ್ರಗ್ಸ್ ಮಾಫಿಯಾ ಜೊತೆ ನಂಟು ಹೊಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಕೆಲವರಿಗೆ ನೋಟಿಸ್ ಕೊಡ್ತಿದ್ದಾರೆ. ನಿನ್ನೆಯಷ್ಟೇ ನಟಿ ರಾಗಿಣಿ ದ್ವಿವೇದಿಗೆ ನೋಟಿಸ್ ಕೊಟ್ಟು, ಇಂದು ಬೆಳಗ್ಗೆ 10ಗಂಟೆಗೆ ಬರಲು ಹೇಳಿದ್ದಾರೆ. ಇದೀಗ ಮತ್ತೊಬ್ಬ ನಟಿ ಸಂಜನಾ ಆಪ್ತನನ್ನ ವಶಕ್ಕೆ ಪಡೆಯಲಾಗಿದೆ.
ನಟಿ ಸಂಜನಾ ಆಪ್ತ ರಾಹುಲ ಎಂಬಾತನನ್ನ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಕಾರ್ ಸಮೇತ ವಶಕ್ಕೆ ಪಡೆಯಲಾಗಿದೆ. ಸೆಲೆಬ್ರಿಟಿ ಪಾರ್ಟಿಗಳಿಗೆ ರಾಹುಲ ಡ್ರಗ್ಸ್ ಸಪ್ಲೈ ಮಾಡ್ತಿರುವ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಸಂಜನಾಗೂ ನೋಟಿಸ್ ನೀಡಲಾಗಿದೆ.