ಚಂದನವನದಲ್ಲಿ ಡ್ರಗ್ಸ್ ನಶೆ: ತುಪ್ಪದ ಹುಡ್ಗಿಗೆ ನೋಟಿಸ್!

741

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ನಶೆಗೆ ಸಂಬಂಧಿಸಿದಂತೆ ದಿನಗಳು ಕಳೆದಂತೆ ಹೊಸ ಹೊಸ ಟ್ವಿಸ್ಟ್ ಸಿಗ್ತಿದೆ. ಇದೀಗ ನಟಿ ರಾಗಿಣಿ ದ್ವಿವೇದಿಗೆ ಸಿಸಿಬಿ ಪೊಲೀಸರು ನೋಟಿಸ್ ಕೊಟ್ಟಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ.

ಸಿಸಿಬಿ ಪೊಲೀಸರ ನೋಟಿಸ್ ನಿಂದಾಗಿ ನಟಿ ರಾಗಿಣಿಗೆ ಟೆನ್ಷನ್ ಶುರುವಾಗಿದೆ. ಇದರೊಂದಿಗೆ ಚಂದನವನದಲ್ಲಿ ನಟ, ನಟಿಯರಲ್ಲಿ ನಡುಕ ಶುರುವಾಗಿದೆ. ಇನ್ನು ಈ ಸಂಬಂಧ ರಾಗಿಣಿ ಆಪ್ತ ರವಿಶಂಕರ ಎಂಬುವವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!