ಪ್ರಜಾಸ್ತ್ರ ಸುದ್ದಿ
ನವದೆಹಲಿ: ಈ ಹಿಂದೆ ಟಿಕ್ ಟಾಕ್ ಸೇರಿ ಹಲವು ಆ್ಯಪ್ ಗಳನ್ನ ಬ್ಯಾನ್ ಮಾಡಿ ಚೀನಾಗೆ ಟಾಂಗ್ ಕೊಟ್ಟಿದ್ದ ಭಾರತ ಸರ್ಕಾರ, ಇದೀಗ ಪಬ್ ಜಿ ಸೇರಿ 114 ಆ್ಯಪ್ ಗಳನ್ನ ಬ್ಯಾನ್ ಮಾಡಿದೆ. ಈ ಮೂಲಕ ಚೀನಾಗೆ ಮತ್ತೊಂದು ಹಂತದ ಶಾಕ್ ನೀಡಿದೆ.
ಭಾರತದಲ್ಲಿ ಪಬ್ ಜಿ ಗೇಮ್ ಗೆ ಕೋಟ್ಯಾಂತರ ಯುವ ಜನತೆ ದಾಸರಾಗಿದ್ರು. ಇದರ ಸಲುವಾಗಿ ಪ್ರಾಣ ಕಳೆದುಕೊಂಡಿದ್ರು. ಕೆಲಸ ಕಾರ್ಯ ಬಿಟ್ಟು ಮೂರು ಹೂತ್ತು ಪಬ್ ಜಿ ಆಡ್ತಿದ್ರು. ಟಿಕ್ ಟಾಕ್ ಬ್ಯಾನ್ ಆದಾಗ ಹೇಗಾಗಿತ್ತೋ ಇದೀಗ ಪಬ್ ಜಿ ದಾಸರಿಗೂ ಹಾಗೇ ಆಗಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಮೀಮ್ಸ್ ಹಾವಳಿ ಶುರುವಾಗಿದೆ.