ಪತ್ನಿ ಬಳಸಿಕೊಂಡು ಹನಿಟ್ರ್ಯಾಪ್, ನಾಲ್ವರ ಬಂಧನ

299

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ಇತ್ತೀನಚ ದಿನಗಳಲ್ಲಿ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗುತ್ತಿವೆ. ಉದ್ಯಮಿಗಳನ್ನು, ಅಮಾಯಕರನ್ನು ಟಾರ್ಗೆಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಇದೇ ರೀತಿ ಹನಿಟ್ರ್ಯಾಪ್ ಮಾಡಲು ಹೋದ ನಾಲ್ವರನ್ನು ಸಿಸಿಬಿ ವಿಶೇಷ ಟೀಂ ಬಂಧಿಸಿದೆ.

ಖಲೀಮ್, ಇತನ ಪತ್ನಿ ಸಭಾ, ಓಬೇದ್ ರಕೀಮ್ ಹಾಗೂ ಅತೀಕ್ ಬಂಧಿತರು. ಉದ್ಯಮಿ ಅತಿಯುಲ್ಲಾ ಹತ್ತಿರ ಖಲೀಮ್ ಪತ್ನಿ ಸಭಾಳನ್ನು ವಿಧುವೆ ಎಂದು ಪರಿಚಯಿಸಿದ್ದಾನೆ. ನಂತರ ಅವುಳನ್ನು ನೋಡಿಕೊಳ್ಳಲು ಕೇಳಿಕೊಂಡಿದ್ದಾನೆ. ಅವರ ನಡುವೆ ಸಂಬಂಧ ಬೆಳೆದಿದೆ.

ಆರ್ ಆರ್ ನಗರದ ಹೋಟೆಲ್ ವೊಂದಕ್ಕೆ ಬರಲು ಹೇಳಿದ್ದಾಳೆ. ಅತಿವುಲ್ಲಾ ಹೋಟೆಲ್ ಗೆ ಬಂದ ಮೇಲೆ, ಹೊಂಚು ಹಾಕಿ ಕಾಯುತ್ತಿದ್ದ ಮೂವರ ಗ್ಯಾಂಗ್ ರೂಮಿಗೆ ನುಗ್ಗಿದೆ. ನಿಮ್ಮಿಬ್ಬರ ಸಂಬಂಧದ ಬಗ್ಗೆ ಕುಟುಂಬಕ್ಕೆ ಹೇಳದಂತೆ ಇರಲು 6 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದೆ. ಅತಿವುಲ್ಲಾ ಸ್ಥಳದಲ್ಲೇ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾನೆ. ಸಿಸಿಬಿ ಪೊಲೀಸರು ಬಂದು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!