ವಾಟ್ಸಪ್ ಮೇಲೆ ಸರ್ಕಾರದ ಕಣ್ಣು.. ಪಿಐಬಿ ಉತ್ತರ ಇಲ್ಲಿದೆ..

398

ಕರೋನಾ ವೈರಸ್ ಸುದ್ದಿ ಸಮಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಬೇಹುಗಾರಿಕೆ ನಡೆಸಿದೆ. ನಿಮ್ಮ ವಾಟ್ಸಪ್ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಹುಷಾರ್ ಆಗಿರಿ ಅನ್ನೋ ಸಂದೇಶ ಹರಿದಾಡ್ತಿದೆ. ಇದ್ರಿಂದಾಗಿ ವಾಟ್ಸಪ್ ಬಳಕೆದಾರರು ಕಂಗಾಲಾಗಿದ್ದಾರೆ.

2 ಬ್ಲೂ+1 ರೆಡ್ ಮಾರ್ಕ್ ಬಂದ್ರೆ ಸರ್ಕಾರ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೆ

1 ಬ್ಲೂ+2ರೆಡ್ ಮಾರ್ಕ್ ಬಂದ್ರೆ ನಿಮ್ಮ ಡೇಟಾವನ್ನ ಸರ್ಕಾರ ಪರಿಶೀಲನೆ ನಡೆಸಿದೆ

3 ರೆಡ್ ಮಾರ್ಕ್ ಬಂದ್ರೆ ಸರ್ಕಾರ ನಿಮ್ಮ ವಿರುದ್ಧ ಕ್ರಮದ ಜೊತೆಗೆ ಮೆಸೇಜ್ ಕಳಿಸಿದವರಿಗೆ ಸಮನ್ಸ್ ನೀಡಲಾಗುತ್ತೆ

ಈ ರೀತಿಯಾದ ಸುದ್ದಿಯೊಂದು ಎಲ್ಲೆಡೆ ಹಬ್ಬಿಕೊಂಡಿದೆ. ಆದ್ರೆ, ಇದೆಲ್ಲವೂ ಸತ್ಯಕ್ಕೆ ದೂರದ ಮಾತು ಎಂದು ಪಿಐಬಿ (press information bureau) ಸ್ಪಷ್ಟಪಡಿಸಿದೆ. ಇದೆಲ್ಲ ವದಂತಿ. ಇದರಿಂದ ದೂರವಿರಿ ಎಂದಿದೆ. ಆದ್ರೆ, ಕೋವಿಡ್ 19 ಕುರಿತು ತಪ್ಪು ಮೆಸೇಜ್ ನಿಯಂತ್ರಣಕ್ಕೆ ಪಾವರ್ಡ್ ಮಾಡುವ ಮೆಸೇಜ್ ಗೆ ಒಂದಕ್ಕೆ ಸೀಮಿತಗೊಳಿಸಲಾಗಿದೆ ಎಂದು ವಾಟ್ಸಪ್ ಸಂಸ್ಥೆ ತಿಳಿಸಿದೆ. ಹೀಗಾಗಿ ಸರ್ಕಾರ ನಿಮ್ಮ ವಾಟ್ಸಪ್ ವಾಚ್ ಮಾಡ್ತಿದೆ ಅನ್ನೋ ಟೆನ್ಷನ್ ಮಾಡಿಕೊಳ್ಳಬೇಡಿ. ಆದ್ರೆ, ಸುಳ್ ಸುದ್ದಿ ಹರಡಿಸುವುದು ಮಾತ್ರ ಮಾಡ್ಬೇಡಿ.




Leave a Reply

Your email address will not be published. Required fields are marked *

error: Content is protected !!