ದೇಶದ ತುಂಬಾ ವಾಟ್ಸಪ್ ಸಮಸ್ಯೆ

151

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಹುಸಂಖ್ಯೆಯ ಜನರು ಬಳಸುವ ಆಪ್ ಗಳಲ್ಲಿ ವಾಟ್ಸಪ್ ಸಹ ಒಂದಾಗಿದೆ. ಇದು ಕೆಲ ತಾಂತ್ರಿಕ ಕಾರಣಗಳಿಂದ ಮಂಗಳವಾರ ಮಧ್ಯಾಹ್ನದಿಂದ ದೇಶದ ತುಂಬಾ ಸಮಸ್ಯೆ ಎದುರಿಸುತ್ತಿದೆ.

ತುಂಬಾ ವೇಗವಾಗಿ ಸಂದೇಶ ಕಳುಹಿಸಬಹುದಾದ ವಾಟ್ಸಪ್ ಕೆಲ ಗಂಟೆಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರ ಬಗ್ಗೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸುದೀರ್ಘವಾಗಿ ಇಷ್ಟೊಂದು ಸಮಸ್ಯೆ ಎದುರಿಸಿರುವುದು ಇದೆ ಮೊದಲು. ಭಾರತ ಮಾತ್ರ ಅಲ್ಲದೆ ಯುಎಸ್, ಜರ್ಮನಿ, ಸೌಥ್ ಆಫ್ರಿಕಾ, ಬಾಂಗ್ಲಾದೇಶ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ವಾಟ್ಸಪ್ ಸಮಸ್ಯೆಯಾಗಿದೆ.




Leave a Reply

Your email address will not be published. Required fields are marked *

error: Content is protected !!